Tuesday, April 8, 2025
Google search engine

Homeರಾಜ್ಯಸುದ್ದಿಜಾಲಚಲಿಸುತ್ತಿದ್ದ ಕಾರಿನ ಮೇಲೆ ಕುಳಿತು ಯುವಕರ ತಂಡ ಹುಚ್ಚಾಟ; ವಿಡಿಯೋ ವೈರಲ್

ಚಲಿಸುತ್ತಿದ್ದ ಕಾರಿನ ಮೇಲೆ ಕುಳಿತು ಯುವಕರ ತಂಡ ಹುಚ್ಚಾಟ; ವಿಡಿಯೋ ವೈರಲ್

ಮಂಗಳೂರು (ದಕ್ಷಿಣ ಕನ್ನಡ): ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಕುಳಿತು ಯುವಕರ ತಂಡ ಹುಚ್ಚಾಟ ಮೆರೆಯುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು, ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಮಾಣಿ-ಮೈಸೂರು ಹೆದ್ದಾರಿಯ ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.

ಸಂಪಾಜೆ ಭಾಗದಿಂದ ಸುಳ್ಯದತ್ತ ವೇಗವಾಗಿ ಚಲಿಸುತ್ತಿರುವ ಕಾರಿನ ಮೇಲ್ಭಾಗ ತೆರೆದು ಆ ಭಾಗದಿಂದ ಇಬ್ಬರು ಯುವಕರು ಮೇಲೆ ಬಂದ್ದಿದ್ದು, ಇಬ್ಬರು ಹಿಂದಿ ಸೀಟಿನ ಎಡ ಹಾಗೂ ಬಲ ಬದಿಯ ಡೋರ್ ಭಾಗದಿಂದ ಮೇಲೆ ಬಂದಿದ್ದು, ಇಬ್ಬರು ಮುಂದಿನ ಎಡರೂ ಡೋರ್‌ನ ಡ್ರೈವರ್ ಸೈಡ್ ಭಾಗದಿಂದಲೂ ಮೇಲೆದ್ದು ನಿಂತು ಹುಚ್ಚಾಟ ಮೆರೆಯುತ್ತಿರುವುದು ವಿಡಿಯೋದಲ್ಲಿದೆ. ಯುವಕರ ಕೃತ್ಯವನ್ನು ಹಿಂದಿನಿಂದ ಕಾರಿನಲ್ಲಿ ಬರುತ್ತಿದ್ದವರು ಚಿತ್ರೀಕರಿಸಿಕೊಂಡಿದ್ದು, ವಿಡಿಯೋ ಇದೀಗ ವೈರಲ್ ಆಗಿದೆ.

RELATED ARTICLES
- Advertisment -
Google search engine

Most Popular