ಮೈಸೂರು: ಮೈಸೂರು ಕರಾಟೆ ಅಸೋಸಿಯೇಷನ್ ನೂತನ ಅಧ್ಯಕ್ಷರಾಗಿ ಸುನಿಲ್ ಕುಮಾರ್. ಎಸ್ ಆಯ್ಕೆಯಾಗಿದ್ದಾರೆ.
ನಗರದ ಸರಸ್ವತಿಪುರಂನ ಜವರೇಗೌಡ ಉದ್ಯಾನದಲ್ಲಿ ನಡೆದ ಅಸೋಸಿಯೇಷನ್ ಸರ್ವ ಸದಸ್ಯರ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಎನ್ ಶಂಕರ್, ಅಜೀಜ್ ಖಾನ್, ಕಾರ್ಯದರ್ಶಿಯಾಗಿ ಭಾರತಿ ಆನಂದ್, ಜಂಟಿ ಕಾರ್ಯದರ್ಶಿಗಳಾಗಿ ಎಂ.ಬಿ ಚಿದಾನಂದ, ಜಿ ಸುಧಾಕರ್ ಖಜಾಂಚಿಯಾಗಿ ಎನ್ ಜಿ ಶಿವದಾಸ್, ನಿರ್ದೇಶಕರಾಗಿ ದೀಪಕ್ ಕುಮಾರ್ , ನಾಗರಾಜ್, ರವೀಂದ್ರನ್ ಮತ್ತು ಶಿವಣ್ಣ ಅವರನ್ನು ಆಯ್ಕೆ ಮಾಡಲಾಗಿದೆ.