ಮಂಡ್ಯ: ತೀವ್ರ ಕುತೂಹಲ ಮೂಡಿಸಿದ್ದ ಮನ್ ಮುಲ್ ಅಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ತೆಕ್ಕೆಗೆ ಜಾರಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿಯಿದೆ.
ಕಾಂಗ್ರೆಸ್ ನ ಬೋರೇಗೌಡ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಬಿಜೆಪಿ ಬೆಂಬಲಿತ ನಿರ್ದೇಶಕ ಸ್ವಾಮಿಯನ್ನು ಸೆಳೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ.
ಅಧಿಕಾರ ಹಿಡಿಯುವಲ್ಲಿ 9 ಮತಗಳು ಬೇಕಿತ್ತು. ಮೂವರು ಕಾಂಗ್ರೆಸ್, ಓರ್ವ ನಾಮ ನಿರ್ದೇಶಕ ಸದಸ್ಯ, ನಾಲ್ವರು ಅಧಿಕಾರಿಗಳ ಬೆಂಬಲದ ಜೊತೆಗೆ ಬಿಜೆಪಿ ಬೆಂಬಲಿತ ಸ್ವಾಮಿಯ ನೆರವಿನಿಂದ ಅಧಿಕಾರ ಹಿಡಿವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ.
ಕೋರಂ ಅಭಾವ ಉಂಟಾಗಲಿ ಎಂಬ ಕಾರಣಕ್ಕೆ ಇಂದು ಸಹ ಚುನಾವಣೆ ಪ್ರಕ್ರಿಯೆಗೆ ಜೆಡಿಎಸ್ ಗೈರಾಗಿದ್ದು, ಜೆಡಿಎಸ್ ತಂತ್ರಕ್ಕೆ ಪ್ರತಿ ತಂತ್ರ ರೂಪಿಸಿ ಕಾಂಗ್ರೆಸ್ ಅಧಿಕಾರ ಹಿಡಿದಿದೆ.