Tuesday, April 8, 2025
Google search engine

Homeರಾಜ್ಯಸುದ್ದಿಜಾಲಸರ್ಕಾರಿ ಸ್ವಾಮ್ಯದ ಮದ್ಯದಂಗಡಿಗಳಲ್ಲಿ ಕಳವು; ವಾರ ಮಾಸುವ ಮುನ್ನವೇ ಮೂರು ಕಡೆ ದರೋಡೆ

ಸರ್ಕಾರಿ ಸ್ವಾಮ್ಯದ ಮದ್ಯದಂಗಡಿಗಳಲ್ಲಿ ಕಳವು; ವಾರ ಮಾಸುವ ಮುನ್ನವೇ ಮೂರು ಕಡೆ ದರೋಡೆ

ವರದಿ: ಎಡತೊರೆ ಮಹೇಶ್

ಎಚ್‌.ಡಿ.ಕೋಟೆ: ಪಟ್ಟಣದ ವಿ‌ಜಯ ಬ್ಯಾಂಕ್ ಹತ್ತಿರದ ಹಾಗೂ ಕೃಷ್ಣಪುರ ಸರ್ಕಲ್ ಸಮೀಪದ ಲ್ಲಿರುವ ಮದ್ಯದಂಗಡಿಗಳಲ್ಲಿ ಏಕಕಾಲದಲ್ಲಿ ಕಳ್ಳತನವಾಗಿದ್ದು, ಹಣದೋಚಿ ಕಳ್ಳರು ಪರಾರಿಯಾಗಿದ್ದಾರೆ.

ಕಳೆದ ರಾತ್ರಿ ಮಳಿಗೆಗಳ ಬಾಗಿಲು ಒಡೆದ ಕಳ್ಳರು ಡ್ರಾನಲ್ಲಿದ್ದ ಹಣಕದ್ದಿದ್ದಲದೇ, ಮದ್ಯದ ಬಾಟಲಿಗಳನ್ನು ಚೆಲ್ಲಾಪಿಲ್ಲಿಮಾಡಿ ಪರಾರಿಯಾಗಿದ್ದಾರೆ.

ಕಳೆದ ವಾರವಷ್ಠೇ ಜೆ.ಎಸ್.ಎಸ್ ಕಲ್ಯಾಣ ಮಂಟಪ ಸಮೀಪದ ಮುಖೇಶ್ ಎಂಬುವವರಿಗೆ ಸೇರಿದ ನಂದಿನಿ ಮಿಲ್ಕ್ ಪಾರ್ಲರ್ ನಲ್ಲಿ ಕಳ್ಳತನಮಾಡಿ 18 ಸಾವಿರ ನಗದು ದೋಚಿ ಕಳ್ಳರು ಕಾಲ್ಕಿತ್ತಿದ್ದರು. ವಾರ ಮಾಸುವ ಮುನ್ನವೇ ಒಂದೇ ದಿನ ಎರಡು ಕಳ್ಳತನ ಪ್ರಕರಣ ಬೆಳಕಿಗೆ ಬಂದಿರುವುದು ಪಟ್ಟಣದ ಜನರ ನಿದ್ದೆಗೆಡಿಸುತ್ತಿದೆ.

 ಪೊಲೀಸರಿಗೆ ಸವಾಲಾಗಿರುವ ಕಳ್ಳತನ‌ ಪ್ರಕರಣಗಳು
ಪೊಲೀಸ್ ಠಾಣೆ ಸಮೀಪದ ಚಾಮುಂಡೇಶ್ವರಿ ದೇವಾಲಯದಲ್ಲಿ ಕಳೆದ ವರ್ಷ ಕಳ್ಳತನ ಮಾಡಿ ಕಳ್ಳರು ಪರಾರಿಯಾಗಿದ್ದರು. ಈ ಪ್ರಕರಣ ಮಾಸುವ ಮುನ್ನವೇ ಹೌಸಿಂಗ್ ಬೋರ್ಡ್ ನ ಮನೆಯೊಂದರಲ್ಲಿ ಹಣ, ಚಿನ್ನಾಭರಣಗಳನ್ನು ದೋಚಿದ್ದ ಕಳ್ಳರು ಹಾಗೂ ಶಿವಾಜಿ ರಸ್ತೆಯ ಮುಶು ಅವರ ನಿವಾಸದಲ್ಲೂ ಚಿನ್ನಾಭರಣ ದೋಚಿದ್ದರು. ಈ ಪ್ರಕರಣಗಳ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ವಿಫಲರಾಗಿರುವ ಪೊಲೀಸರ ನಡೆಯಿಂದ ಸಾರ್ವಜನಿಕರಿಂದ ವ್ಯಾಪಕ ಟೀಕೆಗಳು‌ ಕೇಳಿಬರುತ್ತಿವೆ. ಅಲ್ಲದೇ ಕಳ್ಳರಿಂದ ಪಟ್ಟಣದ ಜನತೆಯಲ್ಲಿ ಭಯದ ವಾತಾವರಣವಿದೆ. ಇದೀಗ ಒಂದೇ ವಾರದಲ್ಲಿ ಮೂರು ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿರುವುದರಿಂದ ಕಳ್ಳರನ್ನು ಪತ್ತೆಹಚ್ಚಿ ಬಂಧಿಸುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.

ಕಳ್ಳತನ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದೇವೆ. ವಿವಿಧ ಆಯಾಮಗಳಲ್ಲಿ ತನಿಖೆ ತೀವ್ರಗೊಳಿಸಿ ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು.

-ಚಿಕ್ಕನಾಯಕ, ಸಬ್ ಇನ್ಸ್ ಪೆಕ್ಟರ್, ಎಚ್.ಡಿ.ಕೋಟೆ ಪೊಲೀಸ್ ಠಾಣೆ.


RELATED ARTICLES
- Advertisment -
Google search engine

Most Popular