ಮೊದಲ ಬಾರಿಗೆ ಸ್ಯಾಂಡಲ್‌ವುಡ್ ನಿರ್ದೇಶಕ ನಂದಕಿಶೋರ್ ಮತ್ತು ಮಲಯಾಳಂ ‘ಸೂಪರ್ ಸ್ಟಾರ್’ ಮೋಹನ್‌ಲಾಲ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ‘ವೃಷಭ’ ಚಿತ್ರಕ್ಕೆ ಚಾಲನೆ ಸಿಕ್ಕಿದೆ.
ಮೋಹನ್ ಲಾಲ್ ನಟನೆಯ ಪ್ಯಾನ್-ಇಂಡಿಯನ್ ಸಿನಿಮಾದಲ್ಲಿ ಬಹು ತಾರಾಗಣವಿದೆ. ರೋಷನ್ ಮೇಕಾ, ಶನಯಾ ಕಪೂರ್, ಜರಾ ಖಾನ್ ಮತ್ತು ಶ್ರೀಕಾಂತ್ ಮೇಕಾ ಮತ್ತಿತ್ತರು ನಟಿಸುತ್ತಿದ್ದಾರೆ. ಸದ್ಯ ರಾಗಿಣಿ ದ್ವಿವೇದಿ ಸಿನಿಮಾ ತಂಡಕ್ಕೆ ಹೊಸ ಸೇರ್ಪಡೆಯಾಗಿದ್ದಾರೆ.
ಕಂದಹಾರ್ ನಂತರ ಮೋಹನ್ ಲಾಲ್ ಜೊತೆ ರಾಗಿಣಿ ವೃಷಭ ಮೂಲಕ ಮತ್ತೆ ಎರಡನೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಾಗಿಣಿ ನಟನೆಯ ಶೀಲಾ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ವೃಷಭ ಚಿತ್ರದ ಸೆಟ್‌ಗೆ ಸೇರುತ್ತಿರುವ ಬಗ್ಗೆ ತಮ್ಮ ಸಂತೋಷ ವ್ಯಕ್ತ ಪಡಿಸಿದ್ದಾರೆ.
ಅಂತಹ ತಂತ್ರಜ್ಞರು ಮತ್ತು ನಟರೊಂದಿಗೆ ಕೆಲಸ ಮಾಡುವುದು ಅದ್ಭುತ ಅನುಭವ. ಕಂದಹಾರ್ ನಂತರ ಮೋಹನ್ ಲಾಲ್ ಜೊತೆ ಮತ್ತೆ ಸಿನಿಮಾ ಮಾಡುತ್ತಿರುವುದು ಖುಷಿ ತಂದಿದೆ. ನನಗೆ ಆಗುತ್ತಿರುವ ಸಂತೋಷವನ್ನು ಈ ಕ್ಷಣದಲ್ಲಿ ವ್ಯಕ್ತ ಪಡಿಸಲು ಸಾಧ್ಯವಾಗುತ್ತಿಲ್ಲ, ಸಿನಿಮಾದಲ್ಲಿ ನನ್ನದು ಅತ್ಯದ್ಭುತ ಪಾತ್ರವಾಗಿದೆ ಎಂದು ರಾಗಿಣಿ ಹೇಳಿದ್ದಾರೆ
ಕನೆಕ್ಟ್ ಮೀಡಿಯಾ ಮತ್ತು ಎವಿಎಸ್ ಸ್ಟುಡಿಯೋಸ್ ಸಹಯೋಗದೊಂದಿಗೆ ಬಾಲಾಜಿ ಟೆಲಿಫಿಲ್ಮ್ಸ್‌ನ ಏಕ್ತಾ ಕಪೂರ್ ನಿರ್ಮಿಸುತ್ತಿರುವ ಸಿನಿಮಾ 2024 ರ ಬಿಡುಗಡೆಯಾಗಲಿದೆ. ಚಿತ್ರವು ಮಲಯಾಳಂ, ತೆಲುಗು, ಕನ್ನಡ, ತಮಿಳು ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿದೆ