ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಕರ್ತಾಳು ಗ್ರಾಮದಲ್ಲಿ ತ್ರಿವಿಧ ದಾಸೋಹಿ ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳ 118ನೇ ಜನ್ಮದಿನ ಹಾಗೂ ಲಿಂಗೈಕ್ಯ ರೇಣುಕಾ ರಾಜಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯಸರಣೆ ಕಾರ್ಯಕ್ರಮ ಜರುಗಿತು.

ಕರತಾಳು ಗ್ರಾಮದ ವೀರಶೈವ ಲಿಂಗಾಯಿತ ಸಮಾಜ ನೇತೃತ್ವ ವಿವಿಧ ಸಮಾಜ ಮುಖಂಡರ ಸಮ್ಮುಖ ನಡೆದ ಕಾರ್ಯಕ್ರಮದಲ್ಲಿ ತೆರೆದ ಟ್ರ್ಯಾಕ್ಟರ್ ನಲ್ಲಿ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಹಾಗೂ ರೇಣುಕಾ ರಾಜಶೇಖರ ಶಿವಾಚಾರ್ಯ ಮಹಾಸ್ವಾಮಿಜಿಗಳ ಭಾವಚಿತ್ರವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಿ ಮಂಗಳವಾದ್ಯ ದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು ಈ ವೇಳೆ ಸ್ಥಳೀಯರು ತಮ್ಮ ಮನೆಗಳ ಬಳಿ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು ಬಳಿಕ ಮಠದ ಆವರಣ ಬಳಿ ಗ್ರಾಮಸ್ಥರಿಗೆ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭ ಗ್ರಾಮದ ಮುಖಂಡರಾದ ನಟರಾಜ್, ಶಿಕ್ಷಕರಾದ ವಿಜಯಕುಮಾರ್, ಕುರ್ಜಿನ ಹಟ್ಟಿ ಜಗದೀಶ್, ಹನಸೋಗೆ ಪಿಎಸಿಸಿಎಸ್ ಅಧ್ಯಕ್ಷರಾದ ಕೆ.ವಿ ಮಹದೇವಪ್ಪ ಅವರು ಮಾತನಾಡಿ ನಡೆದಾಡುವ ದೇವರೆಂದೇ ಪ್ರಸಿದ್ಧಿ ಹೊಂದಿದ್ದ ಡಾ.ಶ್ರೀ ಶಿವಕುಮಾರ ಮಹಾ ಸ್ವಾಮೀಜಿಗಳು ತ್ರಿವಿಧ ದಾಸೋಹದ ಮೂಲಕ ಜಗತ್ತಿಗೆ ಉತ್ತಮ ಸಂದೇಶ ಸಾರಿ ಅಮರರಾದವರು ಅವರು ನಡೆದು ಬಂದ ಹಾದಿ ಹಾಗೂ ಜೀವನಶೈಲಿ ನಮ್ಮೆಲ್ಲರಿಗೂ ಮತ್ತು ಮುಂದಿನ ಪೀಳಿಗೆಗೂ ಆದರ್ಶಪ್ರಾಯವಾಗಬೇಕಿದೆ, ಜಾತಿ ಮತ ಪಂಥ ಮರೆತು ತ್ರಿವಿಧ ದಾಸೋಹದ ಮೂಲಕ ಕೋಟ್ಯಾಂತರ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದರು ಎಂದರು.
ಬಾಳೆಹೊನ್ನೂರು ಸಂಸ್ಥಾನ ಪೀಠದ ಕರತಾಳು ಶಾಖೆಯ ಪೂಜ್ಯ ಗುರುಗಳಾದ ರೇಣುಕಾ ರಾಜಶೇಖರ ಶಿವಾಚಾರ್ಯ ಸ್ವಾಮೀಜಿಗಳು ಸಹ ಹಲವು ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಮನೆ ಮಾತಾಗಿದ್ದರು ಎಂದು ಸ್ಮರಿಸಿದರು.
ಈ ಸಂದರ್ಭ ಗ್ರಾಮದ ಮುಖಂಡರಾದ ಕಿರಣ್ ಕುಮಾರ್, ರುದ್ರೇಶ್, ರಜಿ, ಉಮೇಶ್, ಕುಮಾರ್, ಸುರೇಶ್, ಕೆಂಡಗಣ್ಣಪ್ಪ, ನಾಗರಾಜ್, ಹರೀಶ್, ನವೀನ್, ರಾಜೇಶ್, ಸಂದೇಶ್, ದಿನೇಶ್, ನೀಲಕಂಠ, ವೃಷಭೇಂದ್ರ, ಪರಮೇಶ್, ದಯಾನಂದ್, ಧನುಷ್, ಸಾಗರ್, ಮಿಲ್ ಹರೀಶ್, ಸಂದೀಪ್, ಶಿವಾನಂದ್, ಚಂದ್ರಶೇಖರ್ ಸೇರಿದಂತೆ ಶ್ರೀ ಮಲೆ ಮಹದೇಶ್ವರ ಸಂಘ ಪದಾಧಿಕಾರಿಗಳು ಸದಸ್ಯರು ಗ್ರಾಮಸ್ಥರು ಮಹಿಳೆಯರು ಯುವಕರು ಇದ್ದರು.