Monday, April 14, 2025
Google search engine

HomeUncategorizedರಾಷ್ಟ್ರೀಯಮೋದಿ ಸರ್ಕಾರ ದೇಶೀಯ ಹೂಡಿಕೆಯನ್ನು ನಾಶಪಡಿಸುತ್ತಿದೆ : ಕಾಂಗ್ರೆಸ್‌ ಟೀಕೆ

ಮೋದಿ ಸರ್ಕಾರ ದೇಶೀಯ ಹೂಡಿಕೆಯನ್ನು ನಾಶಪಡಿಸುತ್ತಿದೆ : ಕಾಂಗ್ರೆಸ್‌ ಟೀಕೆ

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶೀಯ ಹೂಡಿಕೆಯನ್ನು ನಾಶಪಡಿಸುತ್ತಿದೆ ಎಂದು ಕಾಂಗ್ರೆಸ್ ಕಟುವಾಗಿ ತರಾಟೆಗೆ ತೆಗೆದಕೊಂಡಿದೆ. ಮತ್ತೊಂದು ರೀತಿಯ ಎಫ್‌ಡಿಐ (ಭಯ, ವಂಚನೆ ಮತ್ತು ಬೆದರಿಕೆ) ಅಭ್ಯಾಸದ ಮೂಲಕ ವಿದೇಶಿ ದೇಶೀಯ ಹೂಡಿಕೆಯನ್ನು (ಎಫ್‌ಡಿಐ) ಬಹುತೇಕ ನಾಶ ಪಡಿಸಿದೆ ಎಂದು ಆರೋಪಿಸಿದೆ.

ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಅವರು 2024-25ರ ಏಪ್ರಿಲ್‌ನಿಂದ ಜನವರಿ ಅವಧಿಯಲ್ಲಿ ಭಾರತದಲ್ಲಿ ನಿವ್ವಳ ಎಫ್‌ ಡಿ ಐ ಕೇವಲ 1.4 ಬಿಲಿಯನ್ ಡಾಲರ್ ಮಾತ್ರ ಆಗಿದೆ. ಆದರೆ, ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರದಲ್ಲಿದ್ದಾಗ 2012-13 ರ ಅವಧಿಯಲ್ಲಿ ಇದು 19 ಬಿಲಿಯನ್ ಡಾಲರ್ ಆಗಿತ್ತು ಎಂದು ನೆನಪಿಸಿದ್ದಾರೆ. ಮೋದಿ ಸರ್ಕಾರ ದೇಶೀಯ ಹೂಡಿಕೆ (ಡಿಐ) ನಾಶಪಡಿಸುವುದರ ಜೊತೆಗೆ ಮತ್ತೊಂದು ರೀತಿಯ ಎಫ್‌ ಡಿ ಐ ಅಭ್ಯಾಸದ ಮೂಲಕ ಎಫ್‌ ಡಿ ಐ (ವಿದೇಶಿ ದೇಶೀಯ ಹೂಡಿಕೆ) ಯನ್ನು ಬಹುತೇಕ ನಿರ್ಮೂಲನೆ ಮಾಡಲಾಗಿದೆ ಎಂದು ರಮೇಶ್ ವಾಗ್ದಾಳಿ ನಡೆಸಿದ್ದಾರೆ.

ಜನವರಿಯಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಅಧಿಕಾರ ವಹಿಸಿಕೊಳ್ಳುವುದಕ್ಕೂ ಮೊದಲೇ ಮೋದಿ ಸರ್ಕಾರ ಈ ಸಾಧನೆ ಮಾಡಿದೆ.  ಬೈಡನ್ ಅವಧಿಯಲ್ಲಿ, ಚೀನಾ ಹೊರತುಪಡಿಸಿ ಏಷ್ಯಾದ ಇತರೆ ದೇಶಗಳಲ್ಲಿ ಹೂಡಿಕೆ ಮಾಡಲು ಪ್ರಪಂಚದಾದ್ಯಂತದ ಕಂಪನಿಗಳು ಪರದಾಡುತ್ತಿದ್ದವು. ಭಾರತ ದುರ್ಬಲವಾಗಿದ್ದಾಗ ವಿಯೆಟ್ನಾಂ, ಇಂಡೋನೇಷ್ಯಾ ಮತ್ತು ಬಾಂಗ್ಲಾದೇಶ ಶತಕೋಟಿ ಹೂಡಿಕೆಗಳನ್ನು ಪಡೆದವು ಎಂದು ಅವರು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular