Saturday, April 19, 2025
Google search engine

Homeರಾಜ್ಯಸುದ್ದಿಜಾಲಮದ್ದೂರಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ: ಶಿಕ್ಷಣದ ಮಹತ್ವ ಬಿಂಬಿಸಿದ ಬಳಗದ ಅಧ್ಯಕ್ಷ ಡಾ....

ಮದ್ದೂರಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ: ಶಿಕ್ಷಣದ ಮಹತ್ವ ಬಿಂಬಿಸಿದ ಬಳಗದ ಅಧ್ಯಕ್ಷ ಡಾ. ಕೃಷ್ಣ

ಮದ್ದೂರು: ಮಹಿಳೆಯರು ಸೇರಿದಂತೆ ಪ್ರತಿಯೊಬ್ಬರೂ ಶಿಕ್ಷಣವನ್ನ ಪಡೆಯುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದು ಸಂವಿಧಾನದಲ್ಲಿ ಶಿಕ್ಷಣವನ್ನ ಕಡ್ಡಾಯಗೊಳಿಸಿದ ಮಹಾನ್ ಚೇತನ ಡಾ.ಬಿ .ಆರ್. ಅಂಬೇಡ್ಕರ್ ರವರು ಎಂದು ನಿವೃತ್ತ ಪ್ರಾಂಶುಪಾಲ ಹಾಗೂ ಚುಂಚಶ್ರೀ ಬಳಗದ ಅಧ್ಯಕ್ಷ ಡಾ. ಕೃಷ್ಣ ಅವರು ಹೇಳಿದರು.

ಪಟ್ಟಣದ ಡಾ. ಶಾಂತ ಮರಿಯಪ್ಪ ಸಭಾಂಗಣದಲ್ಲಿ ಎಂ. ಹೆಚ್ಚ್ .ಚನ್ನೇಗೌಡ ವಿದ್ಯಾ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಡಾ. ಬಿ. ಅರ್. ಅಂಬೇಡ್ಕರ್ ರವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.

ದೇಶದಲ್ಲೇ ಅತ್ಯುತ್ತಮವಾದ ಶಿಕ್ಷಣವನ್ನು ಪಡೆದ ಅಂಬೇಡ್ಕರ್ ಅವರು ಸಮಾಜದ ಎಲ್ಲಾ ಸ್ಥರಗಳ ಬಗ್ಗೆ ಆಳವಾದ ಜ್ಞಾನವನ್ನು ಪಡೆದುದರ ಫಲವಾಗಿ ವಿಶ್ವದಲ್ಲೇ ಅತ್ಯುತ್ತಮವಾದ ಸಂವಿಧಾನವನ್ನು ರಚಿಸಲು ಸಾಧ್ಯವಾಯಿತು ಎಂದರೆಲ್ಲದೆ ಇಂದಿಗೂ ಸಮಾಜದ ಕಟ್ಟ ಕಡೆಯ ವ್ಯಕ್ತಿ ಸ್ವಾಭಿಮಾನದಿಂದ ಬದುಕಬೇಕು ಎಂದು ತೋರಿಸಿಕೊಟ್ಟವರು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂ. ಹೆಚ್. ಚೆನ್ನೇಗೌಡ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಸಿ.ಅಪೂರ್ವ ಚಂದ್ರ ಮಾತನಾಡಿ ಬುದ್ಧ, ಬಸವಣ್ಣರ ರೀತಿಯಲ್ಲಿ ಅಂಬೇಡ್ಕರ್ ರವರು ಸಮಾಜದ ಎಲ್ಲರೂ ಶಿಕ್ಷಣ ಪಡೆದುಕೊಂಡು ಮೂಢನಂಬಿಕೆಗಳಿಂದ ಹೊರಬಂದು ಸಮಾಜದ ಅನ್ಯಾಯಗಳನ್ನು ಧೈರ್ಯವಾಗಿ ವಿರೋಧಿಸಬೇಕೆಂದು ಪ್ರತಿಯೊಬ್ಬರನ್ನು ಜಾಗೃತಿಗೊಳಿಸಿದವರು ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಯು. ಎಸ್. ಶಿವಕುಮಾರ್ , ಉಪನ್ಯಾಸಕ ಸುರೇಂದ್ರ, ಮುಖ್ಯ ಶಿಕ್ಷಕರಾದ ಏನ್ ಕೃಷ್ಣ, ಹೆಚ್ಚ್.ಪಿ .ಮಹೇಶ್, ಎಂ . ಟಿ.ಚಂದ್ರಶೇಖರ್, ವರದರಾಜು. ಶಿಕ್ಷಕರುಗಳಾದ ಕೆಂಚೇಗೌಡ, ಪರಮೇಶ್ವರ್ ನಾಯಕ್, ಗಜಾನಂದ, ಅನಿತಾ, ಕೀರ್ತಿ ಕುಮಾರಿ, ಅಶ್ವಿನಿ, ಭವ್ಯ ಕೆ. ಟಿ. ವಿಂದ್ಯಾ ರಾಣಿ, ಯಶಸ್ವಿನಿ ಸತ್ಯ ಪ್ರೇಮ, ಜಬೀನ ಕೌಸರ್ ಸೇರಿದಂತೆ ಇತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular