ಚಾಮರಾಜನಗರ: ಮಹಿಳೆಯರು ರಾಜಕೀಯ, ಆರ್ಥಿಕ ,ಸಾಮಾಜಿಕ, ಧಾರ್ಮಿಕ ,ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಲು ಅಂಬೇಡ್ಕರ್ ರವರ ಕೊಡುಗೆ ಕಾರಣ. ಅವರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವೆಂದು ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಕಾವೇರಿ ಶಿವಕುಮಾರ್ ರವರು ತಿಳಿಸಿದರು.
ಅವರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ ಆರ್ ಅಂಬೇಡ್ಕರ್ ಅವರ ಜನ್ಮದಿನದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಇಂದು ಮಹಿಳೆಯರು ರಾಜಕೀಯ ಕ್ಷೇತ್ರದಲ್ಲಿ ಮುಂದುವರೆಯುತ್ತಿದ್ದಾರೆ .ದೇಶದ ಸಂಸತ್ ,ರಾಜ್ಯ ಮತ್ತು ಜಿಲ್ಲಾ ಗ್ರಾಮ ಪಂಚಾಯಿತಿ ಹಾಗೂ ಎಲ್ಲಾ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ಮಹಿಳೆಯರು ಭಾಗವಹಿಸಿ ರಾಜಕೀಯ ಶಕ್ತಿಯನ್ನು ಬಳಸಿಕೊಳ್ಳಲು ಸಂವಿಧಾನ ನೀಡಿರುವ ಹಕ್ಕುಗಳೆ ಕಾರಣವೆಂದು ತಿಳಿಸಿದರು.

ಉದ್ಘಾಟನೆಯನ್ನು ಮಾಚಿ ನಗರಸಭೆ ಅಧ್ಯಕ್ಷರಾದ ಚಿನ್ನಮ್ಮ ಸಿದ್ದರಾಮಯ್ಯ ನೆರವೇರಿಸಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸುತ್ತಿರುವುದು ಬಹಳ ಸಂತೋಷ. ಅಂಬೇಡ್ಕರ್ ಅವರು ಯಾವುದೇ ಜಾತಿಗೆ ಸೀಮಿತವಾಗದೆ ಇಡೀ ಭಾರತೀಯರಿಗೆ ಅವರ ಕೊಡುಗೆ ಇದೆ. ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಸಾಧಿಸಲು ಪ್ರೇರಣದಾಯಕರಾಗಿದ್ದಾರೆ ಪ್ರತಿಯೊಬ್ಬರು ಶಿಕ್ಷಣ ಪಡೆದು ಅಭಿವೃದ್ಧಿ ಸಾಧಿಸಬೇಕು ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಅಂಬೇಡ್ಕರ್ ಕಷ್ಟದ ನಡುವೆಯೂ ಅಧ್ಯಯನ ಶೀಲರಾಗಿ ,ಜ್ಞಾನ ವಿಕಾಸವನ್ನು ಹೊಂದಿ ಸಮಗ್ರ ಚಿಂತನೆಯ ಮೂಲಕ ವಿಶ್ವ ವ್ಯಾಪಕವಾದ ಸಂವಿಧಾನವನ್ನು ನೀಡಿ ಭಾರತದ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಕಾರಣರಾಗಿದ್ದಾರೆ . ಪ್ರತಿಯೊಬ್ಬರು ಪುಸ್ತಕಗಳನ್ನು ಸಾಹಿತ್ಯ ಅಧ್ಯಯನವನ್ನು ಮಾಡಬೇಕು. ಪ್ರತಿನಿತ್ಯ ಒಂದು ಪುಸ್ತಕವನ್ನ ಓದುವ ಹವ್ಯಾಸವನ್ನು ಬೆಳೆಸಿಕೊಂಡಾಗ ಜೀವನ ಪವಿತ್ರವಾಗುತ್ತದೆ. ಸಾಧನೆಗೆ ದಾರಿಯಾಗುತ್ತದೆ ಎಂದು ತಿಳಿಸಿದರು.
ರಾಮಸಮುದ್ರದ ಜನಪದ ಮಹೇಶ್ ಅವರು ಗಾಯನ ಕಾರ್ಯಕ್ರಮವನ್ನು ನಡೆಸಿಕೊಟ್ಟರು . ಅಂಬೇಡ್ಕರ್ ಕುರಿತ ಅವರ ಗಾಯನ ಸರ್ವರನ್ನು ಆಕರ್ಷಣೆಗೆ ಒಳಪಡಿಸಿತು.
ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾದ ಪದ್ಮಾಪುರುಷೋತ್ತಮ್ ,ಕನ್ನಡ ಸಾಹಿತ್ಯ ಪರಿಷತ್ತಿನ ಶಿವಲಿಂಗ ಮೂರ್ತಿ, ಲಕ್ಷ್ಮಿ ನರಸಿಂಹ ,ರಂಗ ಕಲಾವಿದರಾದ ಗುರುರಾಜ್ ,ಶಿವು ಮುಂತಾದವರು ಉಪಸ್ಥಿತರಿದ್ದರು.