‘ಬಿಗ್ ಬಾಸ್’ ಖ್ಯಾತಿಯ ಮಾಜಿ ಸ್ಪರ್ಧಿ ರಜತ್ ಮತ್ತೊಮ್ಮೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮಚ್ಚು ಹಿಡಿದು ಸಾಮಾಜಿಕ ಜಾಲತಾಣದ ರೀಲ್ಸ್‌ನಲ್ಲಿ ನಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಬಸವೇಶ್ವರನಗರ ಠಾಣೆಯ ಪೊಲೀಸರು ರಜತ್‌ನನ್ನು ಬಂಧಿಸಿದ್ದಾರೆ.
ಈ ಪ್ರಕರಣದ ಕುರಿತು ರಜತ್‌ಗೆ ನೋಟಿಸ್ ನೀಡಲಾಗಿತ್ತು. ವಿಚಾರಣೆಗೆ ಹಾಜರಾಗಲು ನಿರ್ಲಕ್ಷ್ಯ ತೋರಿದ ಕಾರಣ ನ್ಯಾಯಾಲಯ NBW (Non-Bailable Warrant) ಜಾರಿಗೆ ತಂದಿತು. ಈ ಆದೇಶದ ಆಧಾರದ ಮೇಲೆ ಪೊಲೀಸರ ತಂಡ ರಜತ್ ಅವರನ್ನು ಬಂಧಿಸಲು ಮುಂದಾಯಿತು.
ಅವರು ಬಂಧನದಲ್ಲಿರುವಂತೆಯೇ, ಪೊಲೀಸರು ಮತ್ತೊಬ್ಬರು ಸಂಬಂಧಿತ ವ್ಯಕ್ತಿ ವಿನಯ್ ಗೌಡನನ್ನು ಕೂಡ ಬಂಧಿಸಲು ಕಾರ್ಯಚರಣೆ ಕೈಗೊಂಡಿದ್ದಾರೆ. ಇಬ್ಬರನ್ನು ಕೂಡ ಇಂದು (24ನೇ ಎಸಿಎಂಎಂ ಕೋರ್ಟ್) ನ್ಯಾಯಾಲಯಕ್ಕೆ ಹಾಜರುಪಡಿಸುವ ನಿರ್ಧಾರ ಪೊಲೀಸ್ ಇಲಾಖೆ ಕೈಗೊಂಡಿದೆ.