ಹೊಸದಿಲ್ಲಿ: ವಕ್ಫ್ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸುವ ಅರ್ಜಿಗಳ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದೆ. ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಬುಧವಾರ ಮಧ್ಯಂತರ ಆದೇಶ ನೀಡದೆ, ವಿಚಾರಣೆಯನ್ನು ನಾಳೆಗೆ ಮುಂದೂಡಿದರು. ವಕ್ಫ್ ತಿದ್ದುಪಡಿ ಕಾಯ್ದೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಯಾವುದೇ ಕಾರಣವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಅರ್ಜಿದಾರರ ಪರ ಹಾಜರಾಗಿದ್ದ ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಅವರು, ಈ ಕಾಯ್ದೆ ದೇಶವ್ಯಾಪಿ ಪರಿಣಾಮ ಬೀರುತ್ತಿರುವುದರಿಂದ, ಈ ವಿಚಾರಣೆಗಳನ್ನು ಹೈಕೋರ್ಟ್‌ಗಳಿಗೆ ವರ್ಗಾಯಿಸಬಾರದು ಎಂದು ಮನವಿ ಮಾಡಿದರು. ಆದರೆ, ನ್ಯಾಯಮೂರ್ತಿ ಖನ್ನಾ ಈ ಮನವಿಯನ್ನು ತಳ್ಳಿ ಹಾಕಿ, ಒಂದೇ ಹೈಕೋರ್ಟ್ ಎಲ್ಲಾ ಅರ್ಜಿಗಳ ವಿಚಾರಣೆ ನಡೆಸುವ ಸಾಧ್ಯತೆಯೂ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಕ್ಫ್ ಆಸ್ತಿಗಳನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂಬ ಆರೋಪಗಳ ಕುರಿತು ನ್ಯಾಯಾಲಯ ಕಳವಳ ವ್ಯಕ್ತಪಡಿಸಿದ್ದು, ದಿಲ್ಲಿ ಹೈಕೋರ್ಟ್ ಆವರಣವನ್ನೂ ವಕ್ಫ್ ಆಸ್ತಿ ಎಂದು ಹಿಂದೊಮ್ಮೆ ತಿಳಿಸಲಾಗಿತ್ತು ಎಂಬ ಸಂಗತಿಗೆ ನ್ಯಾಯಮೂರ್ತಿಯವರು ಗಮನ ಹರಿಸಿದರು.
ಹಿರಿಯ ವಕೀಲ ಕಪಿಲ್ ಸಿಬಲ್, “ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರನ್ನು ನೇಮಿಸುವುದರಿಂದ ಭಾರತೀಯ ಸಂವಿಧಾನದ 26ನೇ ವಿಧಿಗೆ ವಿರುದ್ಧವಾಗಿದೆ” ಎಂಬ ವಾದವನ್ನು ಮಂಡಿಸಿದರು. ಇದಕ್ಕೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿ, “ನೀವು ಹಿಂದೂ ಧಾರ್ಮಿಕ ಮಂಡಳಿಗಳಲ್ಲಿ ಮುಸ್ಲಿಮರಿಗೆ ಸ್ಥಾನ ಕೊಡುತ್ತೀರಾ?” ಎಂಬ ತೀವ್ರ ಪ್ರಶ್ನೆ ಎಸೆದು ಗಮನ ಸೆಳೆಯಿತು.
ಈಗಾಗಿ, ವಿಚಾರಣೆ ಮುಂದಿನ ದಿನ ನಿರ್ಣಾಯಕವಾಗಲಿದೆ.