ಬೆಂಗಳೂರು: ರಾಜ್ಯಾಧ್ಯಂತ ನಡೆಸಲಾಗುತ್ತಿದ್ದಂತ ಲಾರಿ ಮುಷ್ಕರವನ್ನು ವಾಪಾಸ್ ಪಡೆದಿರುವುದಾಗಿ ಅಧ್ಯಕ್ಷ ಷಣ್ಮುಗಪ್ಪ ಘೋಷಿಸಿದ್ದಾರೆ. ಈ ಮೂಲಕ ಸಚಿವ ರಾಮಲಿಂಗಾರೆಡ್ಡಿ ನಡೆಸಿದಂತ ಸಂಧಾನ ಸಭೆ ಸಕ್ಸಸ್ ಆಗಿದ್ದು, ಲಾರಿ ಮುಷ್ಕರ ವಾಪಾಸ್ ಪಡೆದಂತೆ ಆಗಿದೆ.
ಇಂದು ವಿಧಾನಸೌಧದಲ್ಲಿನ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರ ಕಚೇರಿಯಲ್ಲಿ ಲಾರಿ ಮಾಲೀಕರ ಸಂಘದೊಂದಿಗೆ ಮೂರನೇ ಬಾರಿ ಸಭೆ ನಡೆಸಲಾಯಿತು. ಈ ಹಿಂದೆ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಒಂದು ಸುತ್ತಿನ ಸಭೆ, ಆ ಬಳಿಕ ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಎರಡನೇ ಸಭೆಯನ್ನು ನಿನ್ನೆ ನಡೆಸಲಾಗಿತ್ತು.
ಇಂದಿನ ಸಭೆಯಲ್ಲಿ ಲಾರಿ ಮಾಲೀಕರ ಕೆಲ ಬೇಡಿಕೆಗಳನ್ನು ಈಡೇರಿಸೋದಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂಬುದಾಗಿ ತಿಳಿದು ಬಂದಿದೆ. ಅದರಲ್ಲಿ ಟೋಲ್ ಗಳಲ್ಲಿ ಲಾರಿ, ಗೂಡ್ಸ್ ವಾಹನಗಳಿಗೆ ದರ ಫಿಕ್ಸ್ ಮಾಡಲು ಸಚಿವ ರಾಮಲಿಂಗಾರೆಡ್ಡಿ ಒಪ್ಪಿಗೆ ಸೂಚಿಸಿದ್ದಾರೆ. ಇನ್ನೂ ಕೆಲ ಬೇಡಿಕೆ ಈಡೇರಿಸೋದಕ್ಕೆ ಸರ್ಕಾರ ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳೋ ಭರವಸೆಯನ್ನು ನೀಡಿದ್ದಾರೆ. ಹೀಗಾಗಿ ಲಾರಿ ಮಾಲೀಕರ ಜೊತೆಗಿನ ಸಂಧಾನ ಸಭೆ ಸಕ್ಸಸ್ ಆಗಿದ್ದು, ನಾಳೆಯಿಂದ ಲಾರಿಗಳು ರಾಜ್ಯದಲ್ಲಿ ಎಂದಿನಂತೆ ಸರಕು ಸಾಗಾಣಿಕೆಯಲ್ಲಿ ತೊಡಗೋ ಸಾಧ್ಯತೆ ಇದೆ.