Saturday, April 19, 2025
Google search engine

Homeರಾಜ್ಯಸುದ್ದಿಜಾಲಗುಂಪು ಮನೆ ಕಾಮಗಾರಿ ಮುಂದಿನ ೧೫ ತಿಂಗಳೊಳಗೆ ಪೂರ್ಣ: ಶಾಸಕ ಡಿ.ರವಿಶಂಕರ್

ಗುಂಪು ಮನೆ ಕಾಮಗಾರಿ ಮುಂದಿನ ೧೫ ತಿಂಗಳೊಳಗೆ ಪೂರ್ಣ: ಶಾಸಕ ಡಿ.ರವಿಶಂಕರ್

ವರದಿ:ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ರಾಜೀವಗಾಂಧಿ ವಸತಿ ನಿಗಮದ ವತಿಯಿಂದ ಪಟ್ಟಣದ ನಾಲ್ಕು ಭಾಗಗಳಲ್ಲಿ ನಿರ್ಮಾಣ ಮಾಡುತ್ತಿರುವ ಗುಂಪು ಮನೆ ಕಾಮಗಾರಿಯನ್ನು ಮುಂದಿನ ೧೫ ತಿಂಗಳೊಳಗೆ ಪೂರ್ಣಗೊಳಿಸುವುದಾಗಿ ಶಾಸಕ ಡಿ.ರವಿಶಂಕರ್ ಹೇಳಿದರು.

ಪಟ್ಟಣದ ಮಧುವನಹಳ್ಳಿ ಬಡಾವಣೆಯ ಸಮೀಪ ನಿರ್ಮಾಣ ಮಾಡುತ್ತಿರುವ ಗುಂಪು ಮನೆ ಕಾಮಗಾರಿಯ ಸ್ಥಳವನ್ನು ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪುರಸಭೆ ವ್ಯಾಪ್ತಿಗೆ ಸೇರಿದ ೧ನೇ ವಾರ್ಡಿನ ದಿಡ್ಡೇದಮ್ಮ ದೇವಾಲಯದ ಆವರಣ, ೧೨ನೇ ವಾರ್ಡಿನ ಲಾಲನಹಳ್ಳಿ ರಸ್ತೆಯ ಸಮೀಪ, ೨೧ನೇ ವಾರ್ಡಿನ ಮುಸ್ಲಿಂ ಬಡಾವಣೆಯಲ್ಲಿರುವ ರೇಷ್ಮೇ ಇಲಾಖೆ ಕಛೇರಿಯ ಹಿಂಭಾಗ ಮತ್ತು ೨೩ನೇ ವಾರ್ಡಿನ ಮಧುವನಹಳ್ಳಿ ಇಟ್ಟಿಗೆ ಕಾರ್ಖಾನೆ ಹತ್ತಿರದಲ್ಲಿ ನಾಲ್ಕು ಬಹುಮಹಡಿ ಮನೆಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂದರು.
ಇಲ್ಲಿನ ನಾಲ್ಕು ಪ್ರದೇಶಗಳಲ್ಲಿ ಒಟ್ಟು ೪೮೮ ಮನೆಗಳನ್ನು ನಿರ್ಮಾಣ ಮಾಡಲು ಕ್ರಿಯಾಯೋಜನೆ ತಯಾರಿಸಲಾಗಿದ್ದು ಪ್ರಸ್ತುತ ೫೩ ಮನೆಗಳ ನಿರ್ಮಾಣಕ್ಕೆ ನಿವೇಶನದ ಕೊರತೆ ಉಂಟಾಗಿದ್ದು ಕೂಡಲೇ ಅಗತ್ಯವಿರುವ ಸ್ಥಳ ನಿಗಧಿ ಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

೪೮೮ ಬಹು ಮಹಡಿ ಮನೆಗಳ ನಿರ್ಮಾಣಕ್ಕೆ ೭.೩೫ ಎಕರೆ ಜಾಗ ನಿಗಧಿ ಪಡಿಸಲಾಗಿದ್ದು ಈಗಾಗಲೇ ಈ ಪೈಕಿ ೮೦೧ ಮಂದಿ ಫಲಾನುಭವಿಗಳು ತಮ್ಮ ಪಾಲಿನ ಕಂತಿನ ಹಣ ಪಾವತಿ ಮಾಡಿದ್ದು ಉಳಿದ ಅರ್ಹರು ನಿಗಧಿತ ಅವಧಿಯೊಳಗೆ ಹಣ ಸಂದಾಯ ಮಾಡಬೇಕೆಂದು ಕೋರಿದರು.

ಈವರೆಗೆ ಫಲಾನುಭವಿಗಳಿಂದ ಸಂಗ್ರಹವಾಗಿರುವ ೧೨೩.೦೮ ಹಣದ ಪೈಕಿ ಪುರಸಭೆ ವತಿಯಿಂದ ಈಗಾಗಲೇ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ೧.೧೮ ಕೋಟಿ ಹಣ ಪಾವತಿ ಮಾಡಲಾಗಿದ್ದು ಮನೆ ನಿರ್ಮಾಣದ ಸಂಬAಧ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಕಟಿಸಿದರು.

ಮನೆ ನಿರ್ಮಾಣದ ನಂತರ ಲಾಟರಿ ಮೂಲಕ ಫಲಾನುಭವಿಗಳಿಗೆ ಮನೆಗಳನ್ನು ಹಂಚಿಕೆ ಮಾಡಲಿದ್ದು ಈ ವಿಚಾರದಲ್ಲಿ ಯಾವುದೇ ಪಕ್ಷಪಾತ ಮತ್ತು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಶಾಸಕರು ಪ್ರತಿ ಮನೆಯ ಅಳತೆ ೧೯*೨೨ ಇರಲಿದೆ ಎಂದು ನುಡಿದರು.

ರಾಜೀವ್ ಗಾಂಧಿ ವಸತಿ ನಿಗಮದ ಯೋಜನೆಯಡಿ ಮನೆ ಪಡೆಯಲು ಅರ್ಜಿ ಸಲ್ಲಿಸಿರುವ ಸಾಮಾನ್ಯ ವರ್ಗದ ಫಲಾನುಭವಿಗಳು ೫.೪೪ ಲಕ್ಷ ರೂ ಪಾವತಿಸಬೇಕಿದ್ದು ಉಳಿದ ೪.೮ ಲಕ್ಷ ಮೊತ್ತವನ್ನು ಬ್ಯಾಂಕ್ ಸಾಲವನ್ನಾಗಿ ಮಂಜೂರು ಮಾಡಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದ ಅವರು ಯೋಜನೆಯಡಿ ಪ್ರತಿ ಮನೆಗೆ ಕೇಂದ್ರ ಸರ್ಕಾರ ೧.೫ ಲಕ್ಷ ಮತ್ತು ರಾಜ್ಯ ಸರ್ಕಾರ ೨ ಲಕ್ಷ ಹಣವನ್ನು ಸಹಾಯ ಧನವನ್ನಾಗಿ ನೀಡಲಿದೆ ಎಂದು ದಾಖಲೆ ಪ್ರದರ್ಶಿಸಿದರು.

ಪುರಸಭೆ ಅಧ್ಯಕ್ಷ ಶಿವುನಾಯಕ್, ಸದಸ್ಯರಾದ ಕೋಳಿಪ್ರಕಾಶ್, ನಟರಾಜು, ಶಂಕರ್, ಕಾಂಗ್ರೆಸ್ ನಗರಾಧ್ಯಕ್ಷ ಎಂ.ಜೆ.ರಮೇಶ್, ಮುಖಂಡರಾದ ಶ್ರೀನಿವಾಸ್, ಗೊರಗುಂಡಿಚoದ್ರು, ಆದರ್ಶ, ಧರ್ಮೇಂದ್ರ, ಮೋಹನ್, ರಾಮನಾಥ್ ವಿನಯ್, ಸೇರಿದಂತೆ ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular