ಬೆಂಗಳೂರು: ಮಹಿಳೆಯೊಬ್ಬರಿಗೆ ತಮ್ಮ ಗುಪ್ತಾಂಗ ತೋರಿಸಿ ಅಶ್ಲೀಲತೆ ಪ್ರದರ್ಶಿಸಿದ ಯುವಕನನ್ನು ಶಿವಾಜಿನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಕಾರ್ತಿಕ್ ಎಂದು ಗುರುತಿಸಲಾಗಿದೆ. ಘಟನೆ ಏಪ್ರಿಲ್ 13ರಂದು ಕ್ವೀನ್‌ಸ್ ರಸ್ತೆಯ ರಾಜೀವ್ ಗಾಂಧಿ ಕಾಲೋನಿಯಲ್ಲಿ ನಡೆದಿದೆ.
ಮಹಿಳೆ ಊಟ ಮುಗಿಸಿ ಮಲಗಲು ಮೇಲ ಮಹಡಿಗೆ ಹೋಗುತ್ತಿದ್ದಾಗ, ಎದುರು ಮನೆಯಲ್ಲಿದ್ದ ಕಾರ್ತಿಕ್ ಪ್ಯಾಂಟ್ ಬಿಚ್ಚಿ ಖಾಸಗಿ ಅಂಗ ತೋರಿಸಿದ್ದ. ಮಹಿಳೆ ಈ ವಿಷಯವನ್ನು ಪ್ರಶ್ನಿಸಿದ್ದಕ್ಕೆ, ಕಾರ್ತಿಕ್ ಮಹಿಳೆಯ ಪತಿಯ ಮೇಲೆ ಹಲ್ಲೆ ನಡೆಸಿದ್ದ. ಜಗಳ ತಡೆಯಲು ಬಂದವರ ಮೇಲೆಯೂ ಕೈವಾಡ ಮಾಡಿದ. ಈ ವೇಳೆ ಹಾಲೋಬ್ಲಾಕ್ ಹಾಗೂ ಹೂವಿನ ಪಾಟ್ ಅನ್ನು ಮೇಲಿಂದ ಕೆಳಕ್ಕೆ ಎಸೆದು, ಕೆಳಮಹಡಿಯಲ್ಲಿ ಇದ್ದವರನ್ನು ಗುರಿಯಾಗಿಸಿದ್ದ.
ಘಟನೆಯಲ್ಲಿ ಏಳು ಜನರಿಗೆ ಗಾಯಗಳಾಗಿದ್ದು, ಶಿವಾಜಿನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ವಿಚಾರಣೆಯ ವೇಳೆ ಕಾರ್ತಿಕ್, “ನಾನು ಮೂತ್ರವಿಸರ್ಜನೆ ಮಾಡುತ್ತಿದ್ದೆ, ಆ ಸಮಯದಲ್ಲಿ ಮಹಿಳೆ ಬಂದರು. ಗಲಾಟೆ ಆದದ್ದು ಅದಕ್ಕಾಗಿ” ಎಂದು ಹೇಳಿಕೆ ನೀಡಿದ್ದಾನೆ.