Sunday, April 20, 2025
Google search engine

Homeರಾಜ್ಯಸುದ್ದಿಜಾಲಕೆಎಸ್‌ಸಿಎ ಟಿ20 ಹರಾಜಿನಲ್ಲಿ ಸೈಕಲ್ಪ್ಯೂರ್ ಅಗರಬತ್ತಿ ಒಡೆತನದ ಮೈಸೂರು ವಾರಿಯರ್ಸ್‌ ಗೆ 18...

ಕೆಎಸ್‌ಸಿಎ ಟಿ20 ಹರಾಜಿನಲ್ಲಿ ಸೈಕಲ್ಪ್ಯೂರ್ ಅಗರಬತ್ತಿ ಒಡೆತನದ ಮೈಸೂರು ವಾರಿಯರ್ಸ್‌ ಗೆ 18 ಆಟಗಾರರು ಸೇರ್ಪಡೆ

ಮೈಸೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ ಮುಂಬರುವ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20, 2023ಕ್ಕಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಭಾರತದ ಪ್ರಮುಖ ಅಗರಬತ್ತಿ ತಯಾರಕರಾದ ಎನ್‌ಆರ್‌ ಗ್ರೂಪ್, ತನ್ನ ಒಡೆತನದ ಮೈಸೂರು ವಾರಿಯರ್ಸ್‌ ತಂಡಕ್ಕಾಗಿ 18 ಆಟಗಾರರನ್ನು ಖರೀದಿಸಿದೆ.
ಈ ಆಟಗಾರರು ಆಗಸ್ಟ್ 13, 2023 ರಿಂದ ಪ್ರಾರಂಭವಾಗಲಿರುವ ಮಹಾರಾಜ ಟ್ರೋಫಿ ಕೆಎಸ್‌ಸಿಎ T20 ನಲ್ಲಿ ಮಹಾರಾಜ ವಾರಿಯರ್ಸ್‌ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಮಹಾರಾಜ ಟ್ರೋಫಿ ಕೆಎಸ್‌ಸಿಎ T20 ಟೂರ್ನಿಯ ಬಹು ನಿರೀಕ್ಷಿತ ಎರಡನೇ ಆವೃತ್ತಿಯಲ್ಲಿ ಹೋರಾಡಲು ಆಟಗಾರರು ತಮ್ಮ ತಂಡದೊಂದಿಗೆ ಸಿದ್ಧರಾಗಿದ್ದಾರೆ. ಈ ವರ್ಷ ಪಂದ್ಯಾವಳಿಯು ಕರ್ನಾಟಕ ರಾಜ್ಯದ ಕ್ರಿಕೆಟ್ ಅಭಿಮಾನಿಗಳ ಮನ ತಣಿಸಲಿದ್ದು, ವಿವಿಧ ತಂಡಗಳಿಂದ 700 ಕ್ಕೂ ಹೆಚ್ಚು ಆಟಗಾರರು ಮೈದಾನಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ. ‘ಈ ವರ್ಷ ನಮ್ಮ ಹೊಸ ತಂಡದೊಂದಿಗೆ ನಾವು ಆಶಾದಾಯಕವಾಗಿದ್ದೇವೆ.

ಅನುಭವಿ ಆಟಗಾರರ ಮಾರ್ಗದರ್ಶನದಲ್ಲಿ ಕೆಲವು ಭರವಸೆಯ ಯುವ ಆಟಗಾರರಿದ್ದು, ನಮಗೆ ಗೆಲ್ಲುವ ವಿಶ್ವಾಸವಿದೆ. ಈ ವರ್ಷದ ಮಹಾರಾಜ ಟ್ರೋಫಿ ಕೆಲವು ಉತ್ತಮ ಮತ್ತು ಉತ್ತೇಜಕ ಕ್ರಿಕೆಟ್‌ನೊಂದಿಗೆ ಅತ್ಯಂತ ಮನರಂಜನೆ ನೀಡಲಿದೆ’ ಎಂದು ಮೈಸೂರು ವಾರಿಯರ್ಸ್‌ನ ಮಾಲೀಕರು ಮತ್ತು ಸೈಕಲ್ ಪ್ಯೂರ್
ಅಗರಬತ್ತಿಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಅರ್ಜುನ್ ರಂಗ ಹೇಳಿದರು.
ಐಪಿಎಲ್ ಮಾದರಿಯಲ್ಲಿ 20-20 ಪಂದ್ಯಾವಳಿಯನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಆಯೋಜಿಸಿದೆ ಮತ್ತು 6 ತಂಡಗಳು ಇಲ್ಲಿ ಟ್ರೋಫಿಗಾಗಿ ಸೆಣಸಲಿವೆ. 2009 ರಲ್ಲಿ ಈ ಸರಣಿ ಪ್ರಾರಂಭವಾಗಿದ್ದು, ಹಿಂದೆ ಕರ್ನಾಟಕ ಪ್ರೀಮಿಯರ್ ಲೀಗ್ ಎಂದು ಕರೆಯಲಾಗುತ್ತಿದ್ದ ಮಹಾರಾಜ ಟ್ರೋಫಿ T20ಯ ಅದರ ಎರಡನೇ ಸೀಸನ್‌ ಇದಾಗಿದೆ. ಆಗಸ್ಟ್ 13, 2023 ರಿಂದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ.


ಹರಾಜಿನಲ್ಲಿ ಖರೀದಿಗೊಂಡ ಆಟಗಾರರು

  • ಕರುಣ್ ನಾಯರ್
  • ಸುಚಿತ್ ಜೆ
  • ಪ್ರಸಿದ್ಧ್ ಕೃಷ್ಣ
  • ಶೋಯೆಬ್ ಮ್ಯಾನೇಜರ್
  • ಸಮರ್ಥ ಆರ್
  • ಕಾರ್ತಿಕ್ ಸಿ ಎ
  • ಮನೋಜ್ ಭಾಂಡಗೆ
  • ವೆಂಕಟೇಶ ಎಂ
  • ತುಷಾರ್ ಸಿಂಗ್
  • ಕುಶಾಲ್ ವಾಧ್ವನಿ
  • ಶಶಿಕುಮಾರ್ ಕೆ
  • ರಕ್ಷಿತ್ ಎಸ್
  • ಗೌತಮ್ ಮಿಶ್ರಾ
  • ಶ್ರೀಶ ಎಸ್ ಆಚಾರ್
  • ಮೊನೀಶ್ ರೆಡ್ಡಿ
  • ಆದಿತ್ಯ ಮಣಿ
  • ರಾಹುಲ್ ಸಿಂಗ್ ರಾವತ್
  • ಭರತ್ ಧುರಿ

RELATED ARTICLES
- Advertisment -
Google search engine

Most Popular