ತುಮಕೂರು : ರಾಜ್ಯದ ಜನರು ಆರ್ಥಿಕವಾಗಿ ಸಬಲರಾಗಲು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ಮಾಡಿದ್ದೇವೆ. ಆರ್ಥಿಕವಾಗಿ, ಸಮಾಜಕವಾಗಿ ಶಕ್ತಿ ಬಂದರೆ, ಸಮಾನತೆ ಬರಲು ಸಾಧ್ಯವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇಂದು ತುಮಕೂರಿನಲ್ಲಿ ಕುರುಬ ಸಾಹಿತಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಆರ್ಥಿಕವಾಗಿ ಸಬಲರಾಗಲು ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದ್ದೇವೆ. ಆರ್ಥಿಕವಾಗಿ ಸಮಾಜಕವಾಗಿ ಶಕ್ತಿ ಬಂದರೆ, ಸಮಾನತೆ ಬರಲು ಸಾಧ್ಯವಾಗುತ್ತದೆ ಕೆಲ ಪಟ್ಟ ಭದ್ರ ಹಿತಾಸಕ್ತಿಗಳು ಇದು ದೊಡ್ಡ ತಪ್ಪು ಅಂತ ಮಾತನಾಡುತ್ತಾರೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಿಂದ ಎಷ್ಟು ಉಪಯೋಗ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಧರ್ಮಸ್ಥಳದ ಹೆಗ್ಡೆ ಅವರು ನನಗೆ ಪತ್ರ ಬರೆದಿದ್ದರು. ದೇವಾಲಯಕ್ಕೆ ಬರುವ ಸಂಖ್ಯೆ ಹೆಚ್ಚಾಗಿದೆ ಅಂತ ಪತ್ರ ಬರೆದಿದ್ದರು 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಿದ್ದೇನೆ. ಹಿಂದುಳಿದವರು ಜಾರಿ ಸಮಾವೇಶ ಮಾಡಲಿ ಮುಂದುವರೆಯವರು ಮಾಡಬಾರದು ಅಂತ ಲೋಹಿಯಾ ಹೇಳುತ್ತಿದ್ದರು.ಇದೆಲ್ಲ ಚಿಂತನೆ ಮಾಡಬೇಕು ನನಗೆ ಗೊತ್ತಿರುವ ವಿಚಾರ ಹೇಳಿದ್ದೇನೆ. ಇದರಿಂದ ಕೆಲವರಿಗೆ ನೋವಾದರೆ ನಾನು ಏನು ಮಾಡುವುದಕ್ಕೆ ಆಗಲ್ಲ. ನನ್ನ ಮನಸ್ಸಿನಲ್ಲಿರುವುದನ್ನು ಹೇಳಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು.