ಗದಗ: ಮಾಜಿ ಪ್ರೇಮಿಯ ಬ್ಲ್ಯಾಕ್ ಮೇಲ್ ಗೆ ಹೆದರಿ ಮದುವೆ ಸಂಭ್ರಮದಲ್ಲಿದ್ದ ಯುವತಿಯೋರ್ವಳು ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿರುವ ಘಟನೆ ಗದಗ ತಾಲೂಕಿನ ಅಸುಂಡಿ ಗ್ರಾಮದಲ್ಲಿ ಜರುಗಿದೆ.
29 ವರ್ಷದ ಸೈರಾಬಾನು ನದಾಫ್ ನೇಣಿಗೆ ಶರಣಾದ ಯುವತಿ. ಮುಂದಿನ ತಿಂಗಳು ಅಂದ್ರೆ ಮೇ 8ರಂದು ಸೈರಾಬಾನು ನದಾಫ್ ಮದುವೆ ನಿಗದಿಯಾಗಿತ್ತು. ಹಾಗಾಗಿ ಇತ್ತ ಮನೆಯಲ್ಲಿ ಅದ್ಧೂರಿ ಮದುವೆಗೆ ಭರ್ಜರಿ ತಯಾರಿ ಕೂಡ ನಡೆದಿತ್ತು. ಸೈರಾಬಾನು ಖುಷಿಯಿಂದಲೇ ತಾಳಿ, ಬಟ್ಟೆ ಎಲ್ಲವನ್ನು ಖರೀಸಿದ್ದರು.
ಪೋಷಕರು ಮದುವೆ ವಸ್ತುಗಳ ಖರೀದಿಗೆ ಹೋದಾಗ ಸೈರಾಬಾನು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮನೆಯ ಬಾಗಿಲು ತೆರೆದು ನೋಡಿದಾಗ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದು ತಿಳಿದುಬಂದಿದೆ. ಮಗಳ ಸ್ಥಿತಿ ನೋಡಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಮದುವೆ ಸಂಭ್ರಮದಲ್ಲಿ ಇದ್ದ ಮನೆಯಲ್ಲಿ ಇದೀಗ ಸೂತಕದ ಛಾಯೆ ಆವರಿಸಿದೆ.
ಐದು ವರ್ಷಗಳ ಹಿಂದೆ ಮೈಲಾರಿ ಜೊತೆ ಸೈರಾಬಾನು ನದಾಫ್ ಲವ್ ಬ್ರೇಕಪ್ ಆಗಿತ್ತು. ನಿನಗೆ ತೊಂದರೆ ಕೊಡಲ್ಲ ಅಂತ ಮಾಜಿ ಪ್ರೇಮಿ ಬರ್ತಡೇ ಆಚರಿಸಿದ್ದ. ಆದರೆ ಐದು ವರ್ಷಗಳ ಬಳಿಕ ಮತ್ತೆ ಎಂಟ್ರಿಕೊಟ್ಟ ಪಾಗಲ್ ಪ್ರೇಮಿ, ಬಳಿಕ ವಿಡಿಯೋ, ಫೋಟೋ ವೈರಲ್ ಮಾಡುವುದಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ಹೀಗಾಗಿ ಮರ್ಯಾದೆಗೆ ಹೆದರಿ ಸೈರಾಬಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಡೆತ್ ನೋಟ್ ನಲ್ಲಿ ಯುವತಿ ಬರೆದಿದ್ದೇನು?
‘ನನ್ನ ಸಾವಿಗೆ ನಾನೇ ಮಾಡಿದ ತಪ್ಪು ಅದು ಏನೆಂದರೇ ಮೈಲಾರಿ ಎನ್ನುವ ಹುಡಗನನ್ನು ನಾನು ಪ್ರೀತಿ ಮಾಡಿದೆ. ಅದು 5 ವರ್ಷಗಳ ಹಿಂದೆ ಬ್ರೇಕಪ್ ಆಯಿತು. ಮತ್ತೆ ಇವಾಗ ಅಂದರೆ 1 ತಿಂಗಳ ಹಿಂದೆ ಮತ್ತೆ ಮೀಟ್ ಆಗಿ ಅವರೇ Instagram ನಲ್ಲಿ msg ಮಾಡಿದ್ದರು. ನಂತರ ನನ್ನ ಹುಟ್ಟಿದ ಹಬ್ಬವನ್ನು ಮಾಡಿದ್ದರು. ಅವರು ನನಗೆ ಮಾತು ಕೊಟ್ಟಿದ್ದರು. ನಿನ್ನ ಯಾವತ್ತು ತೊಂದರೆ ಬರದ ಹಾಗೇ ನೋಡಿಕೊಳ್ಳುತ್ತೇನೆ ಎಂದು ಆದರೆ ಇವಾಗ ನನ್ನ ಫೋಟೋ, ವಿಡಿಯೋ ಎಲ್ಲಾ ಇಟ್ಟುಕೊಂಡು ನನ್ನಗೆ ತೊಂದರೆ ಮಾಡುತ್ತಿದ್ದಾರೆ. ಅದಕ್ಕಾಗಿ ನಾನು ನನ್ನ ಸಾವಿನ ನಿರ್ಧಾರ ಮಾಡಿದ್ದೇನೆ. ನನ್ನ ತಂದೆ, ತಾಯಿಗೆ ಯಾವುದೇ ರೀತಿಯಾದ ತೊಂದರೆ ಆಗಬಾರದು. ನನ್ನನ್ನು ಕ್ಷಮಿಸಿ ಎಂದು ಯುವತಿ ಬರೆದಿದ್ದಾರೆ.