ಬೆಂಗಳೂರು: ನಿತ್ಯದ ಕುಡಿಯುವ ನೀರಿನ ತೊಂದರೆಗೊಳಗಾಗಿರುವ ಬೆಂಗಳೂರಿನ ಜನತೆಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಬೆಂಗಳೂರು ಜಲಮಂಡಳಿಯ (BWSSB) ಸಹಕಾರದೊಂದಿಗೆ ‘ಸಂಚಾರಿ ಕಾವೇರಿ’ ಎಂಬ ಹೊಸ ಯೋಜನೆಯನ್ನು ಆರಂಭಿಸಲಾಗಿದೆ. ಇದರಡಿಯಲ್ಲಿ ಬಿಐಎಸ್ ಪ್ರಮಾಣಿತ ಶುದ್ಧ ಕುಡಿಯುವ ನೀರನ್ನು ಟ್ಯಾಂಕರ್‌ಗಳ ಮೂಲಕ ನೇರವಾಗಿ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ.
ಈ ಯೋಜನೆಯ ಉದ್ದೇಶವೇನು?
‘ಸಂಚಾರಿ ಕಾವೇರಿ’ ಯೋಜನೆಯ ಮುಖ್ಯ ಉದ್ದೇಶವೇ ಮಹಾನಗರದಲ್ಲಿ ಕುಡಿಯುವ ನೀರಿನ ಭದ್ರತೆ ಮತ್ತು ಲಭ್ಯತೆಯನ್ನು ಖಚಿತಪಡಿಸುವುದು. BWSSB ನ ನಿಯಂತ್ರಣದಲ್ಲಿ ಈ ಸೇವೆ ಆರಂಭವಾಗಿದ್ದು, ಇದರ ಮೂಲಕ ನಗರವಾಸಿಗಳಿಗೆ ಸರಿಯಾದ ದರದಲ್ಲಿ ಶುದ್ಧ ನೀರನ್ನು ಒದಗಿಸುವ ವ್ಯವಸ್ಥೆ ರೂಪಿಸಲಾಗಿದೆ. ಟ್ಯಾಂಕರ್ ನೀರಿನ ಬಳಕೆದಾರರಿಗೆ ಸಾಮಾನ್ಯವಾಗಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸುವತ್ತ ಇದು ಮಹತ್ವದ ಹೆಜ್ಜೆ ಎನಿಸಬಹುದು.
ಜನರಿಗೆ ಲಾಭವಾಗುವ ಆಯ್ದ ವಿಶೇಷತೆಗಳು:
- ಬಿಐಎಸ್ ಪ್ರಮಾಣಿತ ಶುದ್ಧ ನೀರು: ಈ ಯೋಜನೆಯಡಿಯಲ್ಲಿ ಸರಕಾರವು ನೀಡುವ ನೀರು ಭಾರತೀಯ ಮಾನದಂಡ ಸಂಸ್ಥೆಯ (BIS) ಪ್ರಮಾಣಿತವಾಗಿದ್ದು, ಆರೋಗ್ಯಪೂರ್ಣ ಕುಡಿಯುವ ನೀರಾಗಿ ಗುರುತಿಸಲಾಗಿದೆ.
- ಸರಳ ಬುಕ್ಕಿಂಗ್ ವ್ಯವಸ್ಥೆ: ಟ್ಯಾಂಕರ್ ನೀರಿಗಾಗಿ ಮುಕ್ತವಾಗಿ ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದರೊಂದಿಗೆ, ದುರ್ಬಳಕೆಯ ಅವಕಾಶ ಕಡಿಮೆ ಮಾಡಲಾಗಿದೆ.
- ಧರ ಏರಿಕೆಯ ಆತಂಕ ಇಲ್ಲ: ಯಾವುದೇ ರೀತಿಯ ಸರ್ಚಾರ್ಜ್ ಅಥವಾ ಬೇಡಿಕೆಯ ಆಧಾರದ ಮೇಲೆ ದರ ಏರಿಕೆ ಆಗುವುದಿಲ್ಲ. ಇದು ಸಾರ್ವಜನಿಕರಿಗೆ ಹಣದ ಉಳಿವು ಒದಗಿಸುತ್ತದೆ.
- ಟ್ಯಾಂಕರ್ ಮಾಫಿಯಾ ವಿರುದ್ಧ ಕ್ರಮ: ಟ್ಯಾಂಕರ್ ನೀರಿನ ಮಾಫಿಯಾ ಕುರಿತು ಉಂಟಾದ ತಪ್ಪು ತಿಳಿವಳಿಕೆಯನ್ನು ದೂರಗೊಳಿಸಲು ಮತ್ತು ನಿಯಂತ್ರಣಕ್ಕೆ ತರಲು ಈ ಯೋಜನೆ ಮುಂದಾಗಿದೆ.
- ಪ್ರಾಥಮಿಕವಾಗಿ ಪೂರ್ವ ಹಾಗೂ ಪಶ್ಚಿಮ ಬಾಗದ ಪ್ರದೇಶಗಳಿಗೆ: ಯೋಜನೆಯ ಪ್ರಾರಂಭಿಕ ಹಂತದಲ್ಲಿ ನಗರದ ಪೂರ್ವ ಮತ್ತು ಪಶ್ಚಿಮ ಭಾಗಗಳಿಗೆ ಆದ್ಯತೆ ನೀಡಲಾಗಿದೆ.