ಮೈಸೂರು:ಭೂಮಿಗೆ ಹಾನಿ ಮಾಡದೆ ಸಂರಕ್ಷಿಸುವ ಹೊಣೆ ಸರ್ವರದು. ಭೂಮಿ ಮನುಷ್ಯ ಮತ್ತು ಪ್ರಾಣಿ ಪಕ್ಷಿ ಸುರಕ್ಷಿತವಾಗಿ ಬದುಕಲು ಭಗವಂತ ಸೃಷ್ಟಿಸಿರುವ ಪ್ರಕೃತಿಯ ಜೀವಂತಿಕೆಯ ಪ್ರತೀಕವಾಗಿದೆ ಎಂದು ಸಂಸ್ಕೃತಿ ಚಿಂತಕ, ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ನಗರದ ಶ್ರೀರಾಮಪುರ ಬಡಾವಣೆಯ ಎಂಟನೇ ರಸ್ತೆಯಲ್ಲಿ ಜೈ ಹಿಂದ್ ಪ್ರತಿಷ್ಠಾನ , ಋಗ್ವೇದಿ ಯೂತ್ ಕ್ಲಬ್ ಹಮ್ಮಿಕೊಂಡಿದ್ದ ವಿಶ್ವ ಭೂಮಿ ದಿನ ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟನೆ ನೆರವೇರಿಸಿ ಭೂತಾಯಿ ವಿಶ್ವದ ಸರ್ವರಿಗೂ ಎಲ್ಲವನ್ನು ನೀಡಿದ್ದಾಳೆ. ಆದರೆ ಮನುಷ್ಯ ತನ್ನ ವಿಪರೀತ ಸ್ವಾರ್ಥದಿಂದ ಭೂಮಿಯನ್ನು ತನ್ನ ಇಷ್ಟಕ್ಕೆ ತಕ್ಕಹಾಗೆ ಪರಿವರ್ತಿಸಲು ಪ್ರಯತ್ನಿಸುತ್ತಿದ್ದಾನೆ. ಆದರೆ ಇದು ಸಾಧ್ಯವಿಲ್ಲದ ಮಾತು ಭೂತಾಯಿ ತನ್ನ ಒಡಲನ್ನು ಉಳಿಸಿಕೊಳ್ಳುವುದನ್ನು ತನ್ನಷ್ಟಕ್ಕೆ ತಾನೇ ಮಾಡಿಕೊಳ್ಳುವುದನ್ನು ಮನುಷ್ಯ ಅರ್ಥ ಮಾಡಿಕೊಳ್ಳಬೇಕು. ಪ್ಲಾಸ್ಟಿಕ್ ಬಳಕೆ , ಮರ ಗಿಡಗಳ ಕತ್ತರಿಸುವಿಕೆ ನೀರಿನ ಬಳಕೆ, ಮುಂತಾದ ಪ್ರಕ್ರಿಯೆಗಳ ಮೂಲಕ ಪರಿಸರ ನಾಶಕ್ಕೆ ಕಾರಣಕರ್ತನಾಗಿದ್ದಾನೆ. ಭೂಮಿಯನ್ನು ಸಂರಕ್ಷಿಸಿ ಇಡೀ ಪ್ರಪಂಚದಲ್ಲಿ ಕಳೆದ 50 ವರ್ಷಗಳಿಂದ ಭೂಮಿಯ ಚಿಂತನೆ, ಭೂಮಿಯ ಉಳಿಯುವಿಕೆಗೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ .ಯುವಶಕ್ತಿ ಮತ್ತು ವಿದ್ಯಾರ್ಥಿ ವಿಶೇಷ ಜಾಗೃತಿಯನ್ನು ಹೊಂದಬೇಕು .ಪ್ರತಿಯೊಬ್ಬರು ಪರಿಸರ ಸಂರಕ್ಷಣೆಯಲ್ಲಿ ತೊಡಗಿದಾಗ ಮಾತ್ರ ಭವಿಷ್ಯದಲ್ಲಿ ಮಾನವ ಆರೋಗ್ಯವಾಗಿ ಬದುಕಲು ಸಾಧ್ಯ. ಪರಿಸರ ಹಾನಿಯಿಂದ ಮಾನವ ಜೊತೆಗೆ ಪ್ರಾಣಿ-ಪಕ್ಷಿಗಳ ನಾಶದಿಂದ ಅಸಾಧ್ಯವಾದ ಅನಾರೋಗ್ಯವನ್ನು ಹೊಂದಬೇಕಾಗುತ್ತದೆ. ಭವಿಷ್ಯಕ್ಕಾಗಿ ಭೂ ಸಂರಕ್ಷಣೆಯ ಪಣತೊಡೋಣ ಸಾಧ್ಯವಾದಷ್ಟು ಯೋಚನೆ ಮಾಡಿ, ಹಾನಿಯಾಗದ ಪ್ರೀತಿಯಲ್ಲಿ ಬದುಕುವ ಸಂಕಲ್ಪ ಮಾಡುವ ಪಣ ತೊಡಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯ ಶಿಕ್ಷಕರು, ಜೈ ಹಿಂದ್ ಪ್ರತಿಷ್ಠಾನದ ಮಾರ್ಗದರ್ಶಕರಾದ ಕೆವಿ ಶ್ರೀಮತಿ ಮಾತನಾಡಿ ವಿಶ್ವ ಭೂಮಿ ದಿನವನ್ನು ಪ್ರತಿನಿತ್ಯ ಭಾರತೀಯರು ವಿಶೇಷವಾಗಿ ಆಚರಿಸುತ್ತಾರೆ . ಭಾರತದಲ್ಲಿ ಪ್ರಾತಃಕಾಲ ಎದ್ದು ಭೂಮಿಗೆ ನಮಸ್ಕರಿಸಿ ತನ್ನ ಬದುಕನ್ನು ಆರಂಭಿಸುತ್ತಾನೆ. ಪ್ರತಿಯೊಬ್ಬ ವ್ಯಕ್ತಿಯು ಭೂಮಿಯ ಬಗ್ಗೆ ಶ್ರೇಷ್ಠ ಭಾವನೆಯನ್ನು ಹೊಂದಿದ್ದಾನೆ. ಆದರೆ ಬದುಕು ನಡೆಸುವ ಸಂದರ್ಭದಲ್ಲಿ ಪರಿಸರ ನಾಶದಲ್ಲೂ ತೊಡಗಿದ್ದಾನೆ. ಪರಿಸರದ ನಾಶದ ವಿಷಯದಲ್ಲಿ ಎಚ್ಚರಿಕೆ ಹೆಜ್ಜೆಯನ್ನು ಪ್ರತಿಯೊಬ್ಬರು ಇಡಬೇಕು. ವಿಶ್ವಭೂಮಿ ದಿನ ಜಾಗೃತಿಯ ದಿನವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವನ್ಯಜೀವಿ ಛಾಯಾಗ್ರಾಹಕ ಕಾರ್ತಿಕ್, ಜೈ ಹಿಂದ್ ಪ್ರತಿಷ್ಠಾನದ ಕುಸುಮ,
ಋಗ್ವೇದಿ ಯೂತ್ ಕ್ಲಬ್ ಅಧ್ಯಕ್ಷೆ ಶರಣ್ಯ ಎಸ್ ಋಗ್ವೇದಿ,.ಶ್ರಾವ್ಯ, ಲಕ್ಷ್ಮಿ ,ಸುಚಿತ್ರ ,ಐಶ್ವರ್ಯ ,ಸುಗುಣ ಮುಂತಾದವರು ಉಪಸ್ಥಿತರಿದ್ದರು.