ಬೆಂಗಳೂರು: ನ್ಯಾಯಮೂರ್ತಿಗಳ ವರ್ಗಾವಣೆ ಶಿಫಾರಸನ್ನು ವಿರೋಧಿಸಿ ಎಪ್ರಿಲ್ 23ರಂದು ಕರ್ನಾಟಕ ಹೈಕೋರ್ಟ್ ಕಲಾಪವನ್ನು ಬಹಿಷ್ಕರಿಸಲು ಬೆಂಗಳೂರು ವಕೀಲರ ಸಂಘ ತೀರ್ಮಾನಿಸಿದೆ.
ಕೃಷ್ಣ ಎಸ್. ದೀಕ್ಷಿತ್, ಕೆ. ನಟರಾಜನ್, ಎನ್.ಎಸ್. ಸಂಜಯ ಗೌಡ ಮತ್ತು ಹೇಮಂತ್ ಚಂದನ ಗೌಡರ್ ಅವರ ವರ್ಗಾವಣೆ ಶಿಫಾರಸು ಈ ನಿರ್ಧಾರಕ್ಕೆ ಕಾರಣವಾಗಿದೆ. ಸಂಘದ ವಿಶೇಷ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು, ಧಾರವಾಡ ಮತ್ತು ಕಲಬುರಗಿ ಪೀಠಗಳಲ್ಲಿ ವಕೀಲರು ಬುಧವಾರ ನ್ಯಾಯಾಲಯ ಕಾರ್ಯಚಟುವಟಿಕೆಗಳಲ್ಲಿ ಪಾಲ್ಗೊಳ್ಳಲ್ಲ.
ತಹಸೀಲ್ದಾರ್, ಜಿಲ್ಲಾ ಮತ್ತು ಇತರ ವಿಚಾರಣಾ ನ್ಯಾಯಾಲಯಗಳಿಗೆ ಈ ಬಹಿಷ್ಕಾರ ಅನ್ವಯವಾಗದು ಎಂದು ಸಂಘದ ಅಧ್ಯಕ್ಷ ವಿವೇಕ್ ಸುಬ್ಟಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.