ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕೆ.ಆರ್.ನಗರ ತಾಲೂಕಿನ ಹೊಸಕೊಪ್ಪಲು ಗೇಟ್ ಬಳಿ ಇರುವ ಶ್ರೀ ಆದಿ ಶಕ್ತಿ ಪಟ್ಲದಮ್ಮ ಮತ್ತು ಶ್ರೀ ಲಕ್ಷ್ಮೀ ದೇವಿ ದೇವಸ್ಥಾನದ ಜಾತ್ರಾ ಮತ್ತು ಪೂಜಾ ಮಹೋತ್ಸವ ಏ. 25ರ ಶುಕ್ರವಾರ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಡಿ.ರವಿಶಂಕರ್ ವಹಿಸಲಿದ್ದು ಉದ್ಘಾಟನೆಯನ್ಮು ಮಾಜಿ ಸಚಿವ ಸಾ.ರಾ.ಮಹೇಶ್ ನೇರವೇರಿಸಲಿದ್ದು ಮಾಜಿ ಸಚಿವ ಎಚ್.ವಿಶ್ವನಾಥ್, ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡ ಸ್ವಾಮೇಗೌಡ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಅಂದು ಬೆಳಿಗ್ಗೆ 6.30ಕ್ಕೆ ಗಣಪತಿ ಹೋಮ,ನವಗ್ರಮ ಹೋಮ, ದುರ್ಗ ಹೋಮವನ್ನು ಕೆ.ಆರ್.ನಗರದ ಚಂದ್ರ ಮೌಳೇಶ್ವರ ದೇವಸ್ಥಾನದ ಗಣಪತಿ ಭಟ್ ನೇತೃತ್ವದಲ್ಲಿ ನಡೆಯಲಿದ್ದು 11.30 ಕ್ಕೆ ಮಹಾಮಂಗಳಾರತಿ ಏರ್ಪಡಿಸಲಾಗಿದೆ.
ಮಧ್ಯಾನ 1 ಗಂಟೆಗೆ ಪ್ರಸಾದ ವಿನಿಯೋಗ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಾಲಯ ಕ್ಷೇಮಾಭಿವೃದ್ಧಿ ಟ್ರಸ್ಟ್ ನ ಗೌರವಾಧ್ಯಕ್ಷ ನಿವೃತ್ತ ಎಎಇ ಕೆ.ಬಿ.ಪ್ರಕಾಶ್, ಅಧ್ಯಕ್ಷ ಕೆ.ಬಿ.ಬಲರಾಮೇಗೌಡ, ಉಪಾಧ್ಯಕ್ಷ ಎಚ್.ಪಿ.ನಾಗರಾಜೇಗೌಡ, ಪ್ರಧಾನಕಾರ್ಯದರ್ಶಿ ಕೆ.ಎಸ್.ಹಿರಣ್ಣಯ್ಯ, ಸಹಕಾರ್ಯದರ್ಶಿ ಕೆ.ಟಿ.ಚಂದ್ರೇಗೌಡ ಕೋರಿದ್ದಾರೆ.