ಹೊಸದಿಲ್ಲಿ: ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನವದೆಹಲಿಯಲ್ಲಿ ಉನ್ನತ ಮಟ್ಟದ ಭದ್ರತಾ ಸಭೆ ನಡೆಯಿತು. ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ಎಸ್. ಜೈಶಂಕರ್ ಉಪಸ್ಥಿತರಿದ್ದರು. ಸಭೆಯಲ್ಲಿ ಭಾರತ-ಪಾಕಿಸ್ತಾನ ಸಂಬಂಧಗಳಿಗೆ ಸಂಬಂಧಿಸಿದಂತೆ 5 ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು:
- ಪಾಕಿಸ್ತಾನದೊಂದಿಗೆ ಸಿಂಧೂ ನದಿ ನೀರಿನ ಒಪ್ಪಂದವನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಯಿತು.
- ಭಾರತದಲ್ಲಿ ಇಸ್ಪಿಎಸ್ನಡಿ ವಾಸಿಸುವ ಪಾಕ್ ಪ್ರಜೆಗಳಿಗೆ 48 ಗಂಟೆಗಳಲ್ಲಿ ದೇಶ ತೊರೆಯುವ ಗಡುವು.
- ಅಟ್ಟಾರಿ ಗಡಿಯ ಚೆಕ್ಪೋಸ್ಟ್ ತಕ್ಷಣದಿಂದಲೇ ಮುಚ್ಚುವ ನಿರ್ಧಾರ. ಅಧಿಕೃತ ದಾಖಲೆಗಳೊಂದಿಗೆ ಈ ಗಡಿಮಾರ್ಗವಾಗಿ ಭಾರತ ಪ್ರವೇಶಿಸಿದವರು 2025ರ ಮೇ 1ರೊಳಗೆ ವಾಪಸ್ ಹೋಗಬೇಕು.
- ದೆಹಲಿಯ ಪಾಕಿಸ್ತಾನ ಹೈಕಮೀಶನಿನಲ್ಲಿ ಕಾರ್ಯನಿರ್ವಹಿಸುತ್ತಿರುವ ರಕ್ಷಣಾ ಸೇನಾ, ನೌಕಾಪಡೆ ಹಾಗೂ ವಾಯುಪಡೆ ಸಲಹೆಗಾರರು ಒಂದು ವಾರದೊಳಗೆ ಭಾರತದಿಂದ ಹೊರಹೋಗಬೇಕು.
- ಇಸ್ಲಾಮಾಬಾದ್ನಲ್ಲಿನ ಭಾರತೀಯ ಹೈಕಮೀಶನಿನಿಂದ ಭಾರತೀಯ ಸೈನಿಕ ಸಲಹೆಗಾರರನ್ನು ಹಿಂದಕ್ಕೆ ಕರೆಯುವ ನಿರ್ಧಾರ.