ರಾಯಚೂರು: ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಒಂದಾದ ಗೃಹ ಲಕ್ಷ್ಮಿ ಯೋಜನೆ ಮಹಿಳೆಯರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ 2000 ಸಾವಿರ ರೂಪಾಯಿಯ ಮಹಿಳೆಯ ರಿಗೆ ಖಾತೆಗೆ ಜಮಾ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಯೋಜನೆ ಅನುಷ್ಠಾನಗೊಳಿಸಿದ್ದು, ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಸಾದಾವೂರು ಗ್ರಾಮ ಒನ್ ಕೇಂದ್ರದ ಪಾಸ್‌ವರ್ಡ್ ಖಾಸಗಿ ಅಂಗಡಿ ಯಲ್ಲಿ ದುರ್ಬಳಕೆ ಮಾಡಿಕೊ೦ಡು ಒಂದು ಅರ್ಜಿಗೆ 200 ರೂ. ವಸೂಲಿ ಮಾಡಿದ ಲಕ್ಷ್ಮೀ ಕಂಪ್ಯೂಟರ್ ಅಂಗಡಿ ಮೇಲೆ ತಹಸೀಲ್ದಾರ್ ಎಲ್.ಡಿ. ಚಂದ್ರ ಕಾಂತ ಹಠಾತ್ ದಾಳಿ ಮಾಡಿದ್ದಾರೆ. ಗ್ರಾಮ್ ಒನ್ ಕೇಂದ್ರದ ಪಾಸ್ ವರ್ಡ್ ಖಾಸಗಿ ಅಂಗಡಿಯಲ್ಲಿ ದು ರ್ಬಳಕೆ ಮಾಡಿಕೊಂಡು ಫಲಾನುಭವಿಗಳಿಂದ ಹಣ ವಸೂಲಿ ಮಾಡಿದ ಆರೋಪದ ಹಿನ್ನಲೆಯಲ್ಲಿ ಲಕ್ಷ್ಮಿ ಕಂಪ್ಯೂಟರ್ ಅಂಗಡಿಯನ್ನು ಸೀಜ್ ಮಾಡಲಾಯಿತು. ಸದಾಪೂರು ಗ್ರಾಮದಲ್ಲಿ ಗ್ರಾಮ ಒನ್ ಕೇಂದ್ರ ಇದ್ದರು ಆದ ನ್ನು ಬಂದ್ ಮಾಡಿ ಮಾನ್ವಿ ಲಕ್ಷ್ಮಿ ಕಂ ಪ್ರೊ.ಟರ್ ಅಂಗಡಿಯಲ್ಲಿ ಸರ್ಕಾರ ನೀಡಿದ ಪಾಸ್ ವಡ್೯ ದುರ್ಬಳಕ ಗೊಂಡಿದ್ದು, ಅಂಗಡಿ ಮಾಲೀಕರ ಮೇಲೆ ಪ್ರಕರಣ ದಾಖಲಿಸುವು ದಾಗಿ ತಹಸೀಲ್ದಾರ್ ಚಂದ್ರಕಾಂತತ ತಿಳಿಸಿದ್ದಾರೆ.
ಸೂರ್ಯ ಕಂಪ್ಯೂಟರ್, ಎಕ್ಸ್‌ಲ್ ಕಂಪ್ಯೂಟರ್‌ನಲ್ಲಿ ಕುರ್ಡಿ ಗ್ರಾಮ್ ಒನ್ ಪಾಸ್ ವರ್ಡ ಬಳಕೆ ಸೇರಿ ಒಟ್ಟು ಮೂರು ಖಾಸಗಿ ಅಂಗಡಿ ಮಾಲೀಕರು ಹಾಗೂ ಸರ್ಕಾರದ ಗ್ರಾಮ್ ಒನ್ ಬಾಪೂಜಿ ಕರ್ನಾಟಕ ಒನ್ ಕೇಂದ್ರದಲ್ಲಿ ಮಹಿಳೆಯರಿಗೆ ಉಚಿತ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ಕಲ್ಪಿಸಿದೆ. ಒಂದು ಅರ್ಜಿಗೆ 200 ರಿಂದ 250 ವರೆಗೆ ಹಣ ವಸೂಲಿ ಮಾಡುವ ದಂಧೆ ನಡೆದಿದ್ದು, ಸಂಬಂಧಿಸಿದವರ ವಿರುದ್ಧ ಕ್ರಮಕೈಗೊಳ್ಳುವುದಾಗಿ ತಹಸೀಲ್ದಾರ ಚಂದ್ರಕಾಂತ್ ಅವರು ತಿಳಿಸಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರದ ಗ್ರಾಮ ಒನ್ ಕೇಂದ್ರ ಬಾಪೂಜಿ ಕೇಂದ್ರ ಇವೆ. ಅಲ್ಲಿ ಹೋಗಿ ಮಹಿಳೆಯರು ಯಾವುದೇ ಅರ್ಜಿಗೆ ಹಣ ನೀಡದೆ ತಾವು ಅರ್ಜಿ ಸಲ್ಲಿಸಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಉಪ ತಹಸೀಲ್ದಾರ ಅಬ್ದುಲ್ ವಾಹಿದ್, ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಮಹ್ಮದ್ ಯೂನೂಸ್ ಇದ್ದರು. ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕಾರಣ ದಾಖಲಾಗಿದೆ.