ಬೆಳಗಾವಿ: ಬೆಳಗಾವಿ ನಗರದ ಗಣೇಶಪುರದಲ್ಲಿನ ಅಪಾರ್ಟ್ಮೆಂಟ್‌ವೊಂದರಲ್ಲಿ ಅಂಜನಾ ದಡ್ಡೀಕರ ಹತ್ಯೆ ಪ್ರಕರಣದಲ್ಲಿ ಪೊಲೀಸರು ತಾಯಿ ಜ್ಯೋತಿ ಬಾಂದೇಕರ್, ಮಗಳು ಸುಹಾನಿ ಬಾಂದೇಕರ್ ಮತ್ತು ಅಪ್ರಾಪ್ತ ಪುತ್ರನನ್ನು ಬಂಧಿಸಿದ್ದಾರೆ.
ಏಪ್ರಿಲ್ 22ರಂದು 15 ಸಾವಿರ ರೂ. ಸಾಲವನ್ನು ಬೇಡಿಕೆ ಮಾಡಿದ್ದಕ್ಕೆ ಅಂಜನಾಗೆ ಗಲಾಟೆ ಮಾಡಿಕೊಂಡ ಆರೋಪಿಗಳು ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ. ನಂತರ ಘಟನೆಗೆ ದಿಕ್ಕು ತಪ್ಪಿಸಲು ಚಿನ್ನಾಭರಣ ಕದ್ದಂತೆ ನಾಟಕವಾಡಿ, ಸ್ಥಳದಿಂದ ಪರಾರಿಯಾಗಿದ್ದರು. ಚಿನ್ನ ಕದ್ದಿರುವುದರಿಂದ ಕೊಲೆ ದೋಚಾಟದ ಪ್ರಯತ್ನವೆಂದು ತೋರಿಸಲು ಯತ್ನಿಸಿದ್ದರು. ಪೊಲೀಸರಿಗೆ ಮರೆಮಾಡಲು ಅವರು ಊರಲ್ಲಿ ಇರಲಿಲ್ಲ ಎಂಬ ಭಾವನೆ ಮೂಡಿಸಲು ಪ್ರಯತ್ನಿಸಿದ್ದರು. ಸಿಸಿಟಿವಿ ದೃಶ್ಯಾಧಾರಿತ ತನಿಖೆಯಿಂದ ಪ್ರಕರಣ ಬೆಳಕಿಗೆ ಬಂದಿದೆ.