ಇಸ್ಲಾಮಾಬಾದ್: ಭಾರತದ ವಿರುದ್ಧ ಯುದ್ಧದ ಸನ್ನಿವೇಶ ರಚಿಸುತ್ತಿರುವ ಪಾಕಿಸ್ತಾನಕ್ಕೆ, ಅಚ್ಚರಿ ಮೊರೆಳೆಯುವಂತ ಬೆಳವಣಿಗೆ ಸಂಭವಿಸಿದೆ. ದೇಶದ ಭದ್ರತೆಯನ್ನು ಭಂಗಪಡಿಸುವಂತಹ ಪರಿಸ್ಥಿತಿಯಲ್ಲಿ, ಪಾಕ್ ಸೇನೆಯೇ ಅಸ್ಥಿರವಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ಕೇವಲ ಎರಡು ದಿನಗಳಲ್ಲಿ ಸುಮಾರು 5,000 ಪಾಕಿಸ್ತಾನಿ ಸೇನಾ ಸಿಬ್ಬಂದಿ ಮತ್ತು ಅಧಿಕಾರಿಗಳು ರಾಜೀನಾಮೆ ನೀಡಿದ್ದಾರೆ.
ಈ ರಾಜೀನಾಮೆಗಳ ಹಿಂದೆ ಭಾರತವು ಯಾವುದೇ ಕ್ಷಣದಲ್ಲಿ ಪ್ರಬಲ ಸೇನಾ ಕಾರ್ಯಾಚರಣೆ ನಡೆಸಬಹುದೆಂಬ ಭಯವೂ, ಮತ್ತು ಬಲೂಚಿಸ್ತಾನದಲ್ಲಿ ನಡೆಯುತ್ತಿರುವ ಭೀಕರ ಆತ್ಮಾಹುತಿ ದಾಳಿಗಳೂ ಪ್ರಮುಖ ಕಾರಣಗಳಾಗಿವೆ. ಬಲೂಚಿಸ್ತಾನ್ ಲಿಬರೇಷನ್ ಆರ್ಮಿ (BLA) ಮಾರ್ಚ್ 16ರಂದು ಪುಲ್ವಾಮಾ ಮಾದರಿಯಲ್ಲಿ ಪಾಕ್ ಸೇನಾ ವಾಹನದ ಮೇಲೆ ದಾಳಿ ನಡೆಸಿ ಸುಮಾರು 90 ಸೈನಿಕರನ್ನು ಹತ್ಯೆ ಮಾಡಿದಂತೆಯೇ ಘೋಷಿಸಿತ್ತು.
ಇದರಿಂದ ಆತಂಕಗೊಂಡು ಹಲವಾರು ಸೈನಿಕರ ಕುಟುಂಬಗಳು ಅವರನ್ನು ರಾಜೀನಾಮೆಗೆ ಒತ್ತಾಯಿಸುತ್ತಿವೆ. ಹಲವರು ತಮ್ಮ ಜೀವ ಭದ್ರತೆಯನ್ನು ಕಾಪಾಡಿಕೊಳ್ಳಲು ವಿದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಪಾಕಿಸ್ತಾನ ಸೇನೆಯು ಈ ರಾಜೀನಾಮೆಗಳ ವಿರುದ್ಧ ತೀವ್ರ ಎಚ್ಚರಿಕೆ ನೀಡಿದ್ದು, ಸೇನಾ ಕಾಯ್ದೆ 1952ರಡಿ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಿಸಿದೆ. ಜಾಗತಿಕ ಮಟ್ಟದಲ್ಲಿ ಈಗ ಪಾಕ್ ಸೇನೆಯ ಸ್ಥಿತಿ ಪ್ರಶ್ನೆಯ ಅಂತರಾಷ್ಟ್ರೀಯ ಮಟ್ಟದ ಚರ್ಚೆಯ ವಿಷಯವಾಗಿದೆ.