Wednesday, April 30, 2025
Google search engine

Homeರಾಜ್ಯಸುದ್ದಿಜಾಲಯುಪಿಎಸ್‌ಸಿ ಗೆದ್ದ ಎ.ಸಿ. ಪ್ರೀತಿಗೆ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಪ್ರಶಂಸೆ

ಯುಪಿಎಸ್‌ಸಿ ಗೆದ್ದ ಎ.ಸಿ. ಪ್ರೀತಿಗೆ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಪ್ರಶಂಸೆ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಶಿಕ್ಷಣದಿಂದ ಸರ್ವವನ್ನು ಸಾಧಿಸಬಹುದು ಎಂದು ತೋರಿಸಿಕೊಟ್ಟಿರುವ ನಮ್ಮೂರಿನ ಹೆಣ್ಣು ಮಗಳಾದ ಎ.ಸಿ.ಪ್ರೀತಿ ಸಾಧಕರಿಗೆ ಮಾದರಿ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.
ಯುಪಿಎಸ್‌ಸಿ ಪರೀಕ್ಷೆಯಲ್ಲಿ ೨೬೩ನೇ ರ‍್ಯಾಂಕ್ ಪಡೆದ ಸಾಲಿಗ್ರಾಮ ತಾಲೂಕಿನ ಅಂಕನಹಳ್ಳಿ ಗ್ರಾಮದ ಚನ್ನಬಸಪ್ಪ ಮತ್ತು ನೇತ್ರಾವತಿ ಅವರ ಪುತ್ರಿ ಎ.ಸಿ.ಪ್ರೀತಿ ಅವರಿಗೆ ಕೆ. ಆರ್.ನಗರದ ತಮ್ಮ ನಿವಾಸದಲ್ಲಿ ಕುಟುಂಬದ ವತಿಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿದರು.

ಸಾಧನೆಗೆ ಬಡತನ ಮತ್ತು ಹಳ್ಳಿಗಾಡಿನ ವಾತಾವರಣ ಅಡ್ಡಿಯಾಗುವುದಿಲ್ಲವೆಂದು ತೋರಿಸುವ ಮೂಲಕ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಸರ್ಕಾರಿ ಶಾಲೆ ಮತ್ತು ಕಾಲೇಜಿನಲ್ಲಿ ಪೂರೈಸಿ ದೇಶದ ಪರಮೋಚ್ಚ ಸ್ಪರ್ಧಾತ್ಮಕ ಪರೀಕ್ಷೆಯಾಗಿರುವ ಯುಪಿಎಸ್‌ಸಿಯಲ್ಲಿ ತೇರ್ಗಡೆಯಾಗಿ ಹುಟ್ಟೂರು, ಪೋಷಕರು ಕಲಿಸಿದ ಶಿಕ್ಷಕರು ಮತ್ತುತಾಲೂಕಿಗೆ ಕೀರ್ತಿತಂದಿರುವಇವರ ಸಾಧನೆ ಇತರ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿ ಎಂದು ಪ್ರಶಂಸಿಸಿದರು.

ದೇಶದ ಬೆಳವಣಿಗೆಯಲ್ಲಿ ಅಕ್ಷರ ಮತ್ತುಆರೋಗ್ಯಅತ್ಯಂತ ಪ್ರಮುಖವಾಗಿದ್ದುಅವೆರಡುದೊರೆತರೆ ಸಾಮಾನ್ಯ ವಿದ್ಯಾರ್ಥಿಗಳು ಮುಗಿಲೆತ್ತರದ ಸಾಧನೆ ಮಾಡಬಹುದಾಗಿದ್ದು ಆಳುವ ಸರ್ಕಾರಗಳು ಈ ವಿಚಾರದ ಬಗ್ಗೆ ಗಂಭೀರವಾಗಿಗಮನಹರಿಸಬೇಕುಎ0ದು ಸಲಹೆ ನೀಡಿದರು.

ಸಾಧಕ ವಿದ್ಯಾರ್ಥಿಗಳಿಗೆ ಪೋಷಕರಜತೆಗೆ ಸಾರ್ವಜನಿಕರುಉತ್ತೇಜನ ನೀಡಿ ಪ್ರೋತ್ಸಾಹ ನೀಡಿದರೆಅವರು ಸಮಾಜಕ್ಕೆ ಅನುಕೂಲವಾಗುವಂತಹ ಕೆಲಸಗಳನ್ನು ಮಾಡಲಿದ್ದು ಪ್ರತಿಯೊಬ್ಬರುತಮ್ಮ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಅವರ ಬೆನ್ನೆಲುಬಾಗಿ ನಿಲ್ಲಬೇಕುಎಂದು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿಎಚ್.ವಿಶ್ವನಾಥ್, ಶಾಂತಮ್ಮ ವಿಶ್ವನಾಥ್ ಮತ್ತುಕುಟುಂಬಸ್ಥರು ಹಾಗೂ ಅವರ ಪೋಷಕರನ್ನುಆತ್ಮೀಯವಾಗಿ ಅಭಿನಂದಿಸಿ ನೆನಪಿ ಕಾಣಿಕೆ ನೀಡಿ ಗೌರವಿಸಿದರು.

ಜಿ.ಪಂ.ಮಾಜಿಉಪಾಧ್ಯಕ್ಷ ಎ.ಎಸ್.ಚನ್ನಬಸಪ್ಪ, ಖ್ಯಾತ ಮೂಳೆ ತಜ್ಞ ಡಾ.ಮೆಹಬೂಬ್‌ಖಾನ್, ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷಡಾ.ಡಿ.ನಟರಾಜು, ಪದಾಧಿಕಾರಿಗಳಾದಜಿ.ಜೆ.ಮಹೇಶ್, ಸಿ.ಎಂ.ಅಣ್ಣಯ್ಯ, ಬಿ.ಎಲ್.ಮಹದೇವ್, ಮಧುಕುಮಾರ್, ಲಕ್ಕಿ ಕುಪ್ಪೆ ಶಂಕರೇಗೌಡ, ಡಾ.ಹರೀಶ್, ರಾಜಶೇಖರ್, ತಾಲೂಕು ಕಸಾಪ ಅಧ್ಯಕ್ಷ ಡಿಂಡಿಮಶ0ಕರ್, ತಾಲೂಕು ರೈತ ವೇದಿಕೆ ಅಧ್ಯಕ್ಷ ರಾಮಪ್ರಸಾದ್, ಸರ್ವೋದಯ ಪಕ್ಷದ ಅಧ್ಯಕ್ಷ ಗರುಡಗಂಭಸ್ವಾಮಿ, ನಂಜನಗೂಡು ಸರ್ಕಾರಿ ನೌಕರರ ಸಂಘದ ಅಧ್ಯಕ್ಷಡಾ.ದೀಪು, ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು ಉಪಾಧ್ಯಕ್ಷ ಸುನೀತಾರಮೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular