ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಬಸವಣ್ಣನವರು ಕಾಯಕ ಸಿದ್ದಾಂತ ಭೋದಿಸಿ ದುಡಿಯುವ ಜನರ ಸಮಾಜ ನಿರ್ಮಾಣ ಮಾಡಲು ಶ್ರಮಿಸಿದ ಮಹಾನ್ ಪುರುಷ ಇವರ ತತ್ವ ಮತ್ತು ಆರ್ದಶಗಳನ್ನು ಯುವಜನತೆ ಮೈಗೂಡಿಸಿಕೊಂಡಾಗ ಮಾತ್ರ ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಕೆ.ಆರ್.ನಗರ ಪಟ್ಟಣದ ಬಸವೇಶ್ವರ ಬಡಾವಣೆಯಲ್ಲಿರುವ ಬಸವಣ್ಣನವರ ದೇವಾಲಯದ ಆವರಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಮತ್ತು ಪುರಸಭೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಕರ್ನಾಟಕ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವೇಶ್ವರರ ಜಯಂತಿಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜದಲ್ಲಿರುವ ಮೂಢನಂಬಿಕೆ ,ಅಸ್ಪೂಶ್ಯತೆ, ಜಾತಿ ವರ್ಗ, ಹಾಗೂ ಚಾತುವರ್ಣ ಸಿದ್ದಾಂತ ವಿರೋಧಿಸಿ ಸಮಾನತೆಯ ಸಂದೇಶ ಸಾರಿದ ಬಸವಣ್ಣನವರು ವಿಶ್ವಗುರುವಾಗಿದ್ದು, ೧೨ನೇ ಶತಮಾನದಅವರ ವಚನಗಳು ಮನುಕುಲಕ್ಕೆ ದಾರಿ ದೀಪವಾಗಿದ್ದು ಇದನ್ನು ಜನತೆ ಅರಿತು ನಡೆಯಬೇಕೆಂದರು.
ನಗರದ ಬಸವೇಶ್ವರ ಬಡಾವಣೆಯಲ್ಲಿರುವ ದೇವಿರಮ್ಮ ಶಿಶುವಿಹಾರ ಮೈದಾನದಲ್ಲಿ ಹಿರಿಯ ನಾಗರೀಕರು ಮತ್ತು ಸಾರ್ವಜನಿಕರು ವಾಯುವಿಹಾರ ಮಾಡಿ ವಿಶ್ರಾಂತಿ ಪಡೆಯಲು ಅನುಕೂಲವಾಗುವಂತೆ ಅಭಿವೃದ್ದಿ ಪಡಿಸುವ ಸಲುವಾಗಿ ಪುರಸಭೆ ವತಿಯಿಂದ ೫೦ ಲಕ್ಷರೂ ಅನುದಾನವನ್ನು ಮೀಸಲಿರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬಸವೇಶ್ವರ ಮಹಿಳಾ ಸ್ವ-ಸಹಾಯ ಸಂಘಕ್ಕೆ ಸ್ವಂತಕಟ್ಟಡ ನಿರ್ಮಾಣ ಮಾಡಿಕೊಳ್ಳಲು ಅನುದಾನ ನೀಡುವಂತೆ ಸಂಘದವರು ಮನವಿ ಸಲ್ಲಿಸಿದ್ದು ಮೊದಲ ಹಂತದಲ್ಲಿ ಶಾಸಕರ ನಿಧಿಯಿಂದ ೫ ಲಕ್ಷ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ ಶಾಸಕರು ಬಡಾವಣೆಯ ಸವಾಂರ್ಗೀಣ ಅಭಿವೃದ್ದಿಗೆ ನೀಲಿ ನಕ್ಷೆ ತಯಾರು ಮಾಡಲಾಗಿದ್ದುಅಭಿವೃದ್ದಿ ಕೆಲಸ ಮಾಡಲು ಸ್ಥಳೀಯರು ಸಹಕಾರ ನೀಡಬೇಕು ಎಂದು ಕೋರಿದರು.
ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ, ಪುರಸಭೆಅಧ್ಯಕ್ಷ ಶಿವುನಾಯಕ್, ವೀರಶೈವ ಮಹಾ ಸಭಾದಅಧ್ಯಕ್ಷಕೆಂಪರಾಜು ಮಾತನಾಡಿದರು.
ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷಗಡ್ಡಮಹೇಶ್, ನಿರ್ದೇಶಕ ಸೈಯದ್ಜಾಬೀರ್, ಎಪಿಎಂಸಿ ಮಾಜಿ ನಿರ್ದೇಶಕ ಎಲ್.ಪಿ.ರವಿಕುಮಾರ್, ಪುರಸಭೆ ಸದಸ್ಯರಾದ ಕೋಳಿಪ್ರಕಾಶ್, ಶಂಕರ್‌ಸ್ವಾಮಿ, ಮಂಜುಳಚಿಕ್ಕವೀರು, ಮಾಜಿ ಸದಸ್ಯ ಕೆ.ವಿನಯ್, ಬಿಜೆಪಿ ಅಧ್ಯಕ್ಷ ಸಾ.ರಾ.ತಿಲಕ್, ಕಾಂಗ್ರೆಸ್ ನಗರಾಧ್ಯಕ್ಷ ಎಂ.ಜೆ.ರಮೇಶ್, ಮುಖಂಡರಾದ ತಿಮ್ಮಶೆಟ್ಟಿ, ರಾಜಶೇಖರ್, ಅರುಣ್.ಬಿ.ನರಗುಂದ್, ಚಂದ್ರಶೇಖರ್, ರೇಖಾರವೀಂದ್ರ, ಮನೋಹರಿನಾಗರಾಜ್, ಸಣ್ಣಲಿಂಗಪ್ಪ, ಎ.ಜೆ.ಕುಮಾರ್, ಕೆ.ಸಿ.ಹರೀಶ್, ಕೆ.ಟಿ.ರವೀಂದ್ರ, ಕೆ.ಎನ್.ಮಾದೇಶ್, ವೃಷಬೇಂದ್ರ, ಬಿಇಒ ಆರ್.ಕೃಷ್ಣಪ್ಪ, ಮುಖ್ಯಾಧಿಕಾರಿ ಬಿ.ವಿ.ವೆಂಕಟೇಶ್, ಸಮಾಜ ಕಲ್ಯಾಣಾಧಿಕಾರಿ ಶಂಕರ್‌ಮೂರ್ತಿ ಮತ್ತಿತರರು ಹಾಜರಿದ್ದರು.