Tuesday, May 6, 2025
Google search engine

Homeರಾಜ್ಯಸುದ್ದಿಜಾಲಹರದನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಲಕ್ಕಿಕುಪ್ಪೆ ಎಲ್.ವಿ.ಗೋಪಾಲ್ ಅವಿರೋಧ ಆಯ್ಕೆ

ಹರದನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಲಕ್ಕಿಕುಪ್ಪೆ ಎಲ್.ವಿ.ಗೋಪಾಲ್ ಅವಿರೋಧ ಆಯ್ಕೆ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಸಾಲಿಗ್ರಾಮ ತಾಲೂಕು ಹರದನಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಲಕ್ಕಿಕುಪ್ಪೆ ಎಲ್.ವಿ.ಗೋಪಾಲ್ ಅವಿರೋಧ ಆಯ್ಕೆಯಾದರು. ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಗೋಪಾಲ ಅವರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ವಿನೂತ್ ಅವರು ಪ್ರಕಟಿಸಿದರು.

ಈ ಹಿಂದೆ ಅಧ್ಯಕ್ಷರಾಗಿದ್ದ ಎಸ್.ಆರ್.ಮಂಜುಳಾ ಅವರು ರಾಜೀನಾಮೆ ನೀಡಿದ್ದರಿಂದ ಈ ಹುದ್ದೆ ತೆರವಾಗಿತ್ತು . ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷ ಗೋಪಾಲರವರು, ನನ್ನ ತವರೂರು ಲಕ್ಕಿಕುಪ್ಪೆ ಗ್ರಾಮಕ್ಕೆ ಇದೇ ಮೊದಲ ಬಾರಿಗೆ ಅಧ್ಯಕ್ಷ ಸ್ಥಾನ ದೊರೆತಿದ್ದು, ತುಂಬಾ ಸಂತೋಷವಾಗಿದೆ. ಲಕ್ಕಿ ಕುಪ್ಪೆ ಸೇರಿದಂತೆ ಗ್ರಾಮಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲೂ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಸಂತಸ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯತಿ ಪಿಡಿಒ ಮೋಹನ್, ಉಪಾಧ್ಯಕ್ಷ ಮಹದೇವ, ಸದಸ್ಯರಾದ ಎಚ್.ಎಸ್. ಜಯರಾಮ್, ನಂದಿನಿ ರಮೇಶ್, ಎಸ್.ಆರ್ .ಮಂಜುಳಾ, ಆರ್. ಮಂಜುಳಾ,ಶೈಲಜಾ, ನವೀನ, ಲತಾ, ರೇಣುಕಮ್ಮ ಮುಖಂಡರಾದ ಲಕ್ಕಿಕುಪ್ಪೆ ಪುಟ್ಟಸ್ವಾಮಿ, ಹರದನಹಳ್ಳಿ ರಮೇಶ್, ಗೋಪಾಲ್, ಶಿಕ್ಷಕ ಶಂಕರಗೌಡ ಸೇರಿದಂತೆ ಜೆಡಿಎಸ್ ಪಕ್ಷದ ನೂರಾರು ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

RELATED ARTICLES
- Advertisment -
Google search engine

Most Popular