- ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ರೈತರ ಜೀವನಾಡಿಯಾಗಿರುವ ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆಯನ್ನು 40 ವರ್ಷಗಳ ಅವಧಿಗೆ ನಿರಾಣಿ ಶುಗರ್ಸ್ ನವರಿಗೆ ಗುತ್ತಿಗೆ ನೊಂದಣಿ ಕಾರ್ಯ ಪೂರ್ಣಗೊಂಡಿದ್ದು ಜುಲೈ ತಿಂಗಳಿನಿಂದ ಕಾರ್ಖಾನೆಯ ಕಬ್ಬು ಅರೆಯುವ ಕಾರ್ಯ ಅರಂಭಗೊಳ್ಳಲಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಸಾಲಿಗ್ರಾಮ ತಾಲೂಕಿನ ಚಿಕ್ಕಕೊಪ್ಪಲು ಗ್ರಾಮದ ಹೆಚ್. ದೇವೇಗೌಡ ಸ್ಮಾರಕ ಉಚಿತ ವಾಚನಾಲಯ ಕೇಂದ್ರದ ವತಿಯಿಂದ ಏರ್ಪಡಿಸಿದ್ದ ಭಾರತೀಯ ಸೇನೆಯಲ್ಲಿ ಸುಬೇದಾರರಾಗಿ ಸಿ.ಕೆ. ಲೋಕೇಶ್ ಮತ್ತು ಹವಲ್ದಾರ್ ಮೇಜರ್ ಅಗಿ ಡಿ.ಇ. ಸತೀಶ್‌ಗೌಡ ಸೇವೆ ಸಲ್ಲಿಸಿ ನಿವೃತ್ತರಾದ ಹಿನ್ನಲೆಯಲ್ಲಿ ಏರ್ಪಡಿಸಿರುವ ಸನ್ಮಾನ ಸಮಾರಂಭವನ್ನು ಉದ್ಘಾಟಸಿ ಅವರು ಮಾತನಾಡಿದರು.
ಈ ಕಾರ್ಖಾನೆ ಆರಂಭವಾಗುವುದರಿಂದ ಕಾರ್ಖಾನೆ ವ್ಯಾಪಿಯ ರೈತರು, ಕೂಲಿಕಾರ್ಮಿಕರಿಗೆ ಅನುಕೂಲವಾಗಲಿದ್ದು ಕಾರ್ಖಾನೆ ಆರಂಭಕ್ಕೆ ಕ್ರಮಕೈಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಕ್ಕರೆ ಸಚಿವ ಶಿವನಂದ್ ಪಾಟೀಲ್ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಚಿಕ್ಕಕೊಪ್ಪಲು ಗ್ರಾಮವನ್ನು ಕೇಂದ್ರವನ್ನಾಗಿ ಮಾಡಿ ದೊಡ್ಡಕೊಪ್ಪಲು, ಸಾಲೇಕೊಪ್ಪಲು, ಕುಪ್ಪೆ, ವಡ್ಡರಕೊಪ್ಪಲು, ಕಟ್ಟೆ ಕೊಪ್ಪಲು, ಗುಡುಗನಹಳ್ಳಿ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರೌಢ ಶಾಲೆಯನ್ನು ಆರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ನುಡಿದರು.
ಚಿಕ್ಕಕೊಪ್ಪಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೂರು ವರ್ಷ ತುಂಬಿರುವುದರಿಂದ ಶಾಲೆಯ ಶತಮಾನ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲವೇ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಕರೆಸಿ ಅದ್ದೂರಿಯಾಗಿ ಮಾಡಲು ಪ್ರಯತ್ನ ಮಾಡುವುದಾಗಿ ಹೇಳಿದರು.
” ಸೈನಿಕರನ್ನ ಗೌರವಿಸ ಬೇಕು “
ದೇಶದ ಗಡಿ ಭಾಗದಲ್ಲಿ ನಿಂತು ನಮ್ಮದೇಶದ ರಕ್ಷಣಗೆ ಹಗಲು ರಾತ್ರಿ ತಮ್ಮ ಪ್ರಾಣವನ್ನು ಮುಡಪಾಗಿ ಇಟ್ಟು ಶ್ರಮಿಸುವ ಸೈನಿಕರನ್ನು ಗೌರವಿಸ ಬೇಕಾದ ಜವಬ್ದಾರಿ ಎಲ್ಲರ ಮೇಲಿದ್ದು ಸೈನೆಯಲ್ಲಿ ಕೆಲಸವನ್ನ ಮಾಡಿ ಸೇವೆಯಿಂದ ನಿವೃತ್ತಿಯಾದ ಸಿ.ಕೆ.ಲೋಕೇಶ್ ಮತ್ತು ಡಿ.ಇ.ಸತೀಶ್ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದ ಡಿ.ರವಿಶಂಕರ್ ಪ್ರತಿವರ್ಷ ಹತ್ತಾರು ಸಾಧಕರನ್ನು ಸೇವೆಯನ್ನು ಗುರುತಿಸಿ ಅವರನ್ನು ಸನ್ಮಾನಿಸುವ ಕೆಲಸ ಮಾಡುತ್ತಿರುವ ಯುವರಾಜ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೋ.ಸಿ.ಡಿ.ಪರುಶುರಾಮ್ ಅವರ ಕಾರ್ಯ ನಿಜಕ್ಕು ಶ್ಲಾಘನೀಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಸಿ.ಇ ಧರ್ಮಪಾಲ್ ಸೈನಿಕರ ಸೇವೆ ಮತ್ತು ಅವರಿಂದ ದೇಶಕ್ಕೆ ಸಿಗುತ್ತಿರುವ ರಕ್ಷಣೆ ಕುರಿತು ಮತ್ತು ನಿವೃತ್ತ ಸುಬೇದಾರ ಸಿ.ಕೆ.ಲೋಕೇಶ್ ಮತ್ತು ಹವಲ್ದಾರ್ ಮೇಜರ್ ಅಗಿ ನಿವತ್ತರಾದ ಡಿ.ಇ.ಸತೀಶ್ ಅವರು ತಮ್ಮ ಸೇವಾ ಅವಧಿಯ ಅನುಭವಗಳನ್ನು ಹಂಚಿಕೊಂಡು ಮಾತಾಡಿದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿನ ಸಾಧಕ ವಿದ್ಯಾರ್ಥಿಗಳನ್ನು ಶಾಸಕ ಡಿ.ರವಿಶಂಕರ್ ಅಭಿನಂಧಿಸಿದರು. ಯುವರಾಜ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೋ.ಸಿ.ಡಿ.ಪರುಶುರಾಮ್ ಅವರು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.
ಈ ಸಂದರ್ಭದಲ್ಲಿ ಕುಪ್ಪೆ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿ.ಬಿ.ಸಂತೋಷ್, ಚಿಬುಕಹಳ್ಳಿ ಸಹಕಾರ ಸಂಘದ ಅಧ್ಯಕ್ಷ ಸಿ.ಎಂ.ಶಿವಕುಮಾರ್, ಕುಪ್ಪೆ ಗ್ರಾ.ಪಂ.ಸದಸ್ಯರಾದ ಸಿ.ಬಿ.ಧರ್ಮ, ರೇಖಾ ಉಮೇಶ್, ಮಹೇಂದ್ರ, ನಿವೃತ್ತ ಉಪನ್ಯಾಸಕ ಕೆ.ಎ.ಜವರೇಗೌಡ, ಚಿಮುಕು ಬಳಗದ ಅಧ್ಯಕ್ಷ ಮುದ್ದನಹಳ್ಳಿ ಸೋಮಪ್ಪ, ದೊಡ್ಡಕೊಪ್ಪಲು ಡೈರಿ ಮಾಜಿ ಅಧ್ಯಕ್ಷ ಡಿ.ಎನ್.ಅಪ್ಪಾಜಿ, ಸೊಸೈಟಿ ಮಾಜಿ ಅಧ್ಯಕ್ಷ ಸ್ವಾಮೀಗೌಡ , ಪ್ರಗತಿಪರ ರೈತ ಸತ್ಯಪ್ಪ, ನೀರುಬಳಕೆದಾರರ ಸಂಘದ ಅಧ್ಯಕ್ಷ ಸದಾ ಶಿವಾಕೀರ್ತಿ, ಮುಖಂಡರಾದ ನಿವೃತ್ತ ಶಿಕ್ಷಕ ಕಾಳೇಗೌಡ, ತೊಟ್ಟಲಯ್ಯನ ಸ್ವಾಮೀಗೌಡ, ಯೋಗೇಶ್, ಸಿ.ಎಸ್.ಗಿರೀಶ್, ತಮ್ಮಣ್ಣ, ತೊಟ್ಟಲೇಗೌಡ, ಕೆಂಪೇಗೌಡ, ಡೈರಿ ಉಮೇಶ್, ಪಿಎಚ್ಡಿ ಸಂಶೋದಕರಾದ ಡಿ.ಸಾಲುಂಡಿ ಚಂದ್ರಕಾಂತ್, ಆನಂದ , ರಾಮತುಂಗಾ ಹರೀಶ್ , ಸೇರಿದಂತೆ ಮತ್ತಿತರರು ಹಾಜರಿದ್ದರು.