ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ತಾಲೂಕಿನ ಕಾಳೇನಹಳ್ಳಿ-ಬಿ ಗ್ರಾಮದಲ್ಲಿರುವ ಆದರ್ಶ ಪದವಿ ಪೂರ್ವ ಕಾಲೇಜಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.೯೮.೪೪% ಫಲಿತಾಂಶ ಬಂದಿದ್ದು ೬೦೦ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಆನಂತರ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕಿ ರುಕ್ಮಿಣಿ ಎಲ್ಲಾ ವಿದ್ಯಾರ್ಥಿಗಳಿಗೂ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
೭೮ ವಿದ್ಯಾರ್ಥಿಗಳ ಪೈಕಿ ನರ್ಮತಾಬಾಯಿ ೬೧೭, ಪೂರ್ಣಿಮ.ಬಿ. ಅರ್ಕಚಾರಿ ೬೧೩, ಜೆ.ಆರ್.ಸಹನ ೬೧೨, ಹೆಚ್.ವಿ.ಕಾರ್ತಿಕ್‌ರಾಜ್ ೬೧೨, ದಿಗಂತ್‌ಗೌಡ ೬೦೬, ಬಿ.ಎಸ್.ಕೃತಿಕ ೬೦೬, ಜೆ.ತ್ರಿಪತಿ ೬೦೫, ಶ್ರೇಯಾ ೬೦೩, ಬಿ.ಎಂ.ತ್ರಿಷಾ ೬೦೨, ಸುಜಾತ ಎಸ್.ನಾಯಕ್ ೬೦೨, ಸೌಪರ್ಣಿಕ ೬೦೧, ಹೆಚ್.ಡಿ.ಮೋಹಿತ್ ೬೦೧, ಅಹಲ್ಯ ೬೦೦ ಇವರುಗಳು ೬೨೫ಕ್ಕೆ ೬೦೦ಕ್ಕೂ ಹೆಚ್ಚು ಅಂಕ ಗಳಿಸುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಹೇಳಿದರು.
ಮುಂದಿನ ಶೈಕ್ಷಣಿಕ ಸಾಲಿನಿಂದ ಶಾಲೆಯಲ್ಲಿ ಪಿಯುಸಿ ಕಾಲೇಜು ಆರಂಭವಾಗಲಿದ್ದು ೧೨೦ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡಲು ಸರ್ಕಾರ ಅನುಮತಿ ನೀಡಿದ್ದು ಉತ್ತೀರ್ಣವಾಗಿರುವ ೭೮ ವಿದ್ಯಾರ್ಥಿಗಳ ಜತೆಗೆ ಬೇರೆ ಶಾಲೆಯ ವಿದ್ಯಾರ್ಥಿಗಳಿಗೂ ಅವಕಾಶ ನೀಡಲಿದ್ದು, ಪ್ರವೇಶ ಪರೀಕ್ಷೆ ಬರೆದು ಪ್ರವೇಶ ಪಡೆಯಬೇಕೆಂದು ಕೋರಿದರು.ಈ ಸಂದರ್ಭದಲ್ಲಿ ಪಿಯು ಕಾಲೇಜು ಪ್ರಾಂಶುಪಾಲ ಕೃಷ್ಣಯ್ಯ, ಎಸ್‌ಡಿಎಂಸಿ ಅಧ್ಯಕ್ಷ ಕೆ.ಪಿ.ಜಗದೀಶ್ ಮತ್ತು ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿಗಳು ಹಾಜರಿದ್ದರು.