Monday, May 12, 2025
Google search engine

Homeಕ್ರೀಡೆಟೆಸ್ಟ್ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿಯಿಂದ ವಿದಾಯ

ಟೆಸ್ಟ್ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿಯಿಂದ ವಿದಾಯ

ಮುಂಬೈ: ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಬೆನ್ನಲ್ಲೆ, ಇದೀಗ ಭಾರತ ತಂಡದ ಮತ್ತೊಬ್ಬ ದಿಗ್ಗಜ ವಿರಾಟ್ ಕೊಹ್ಲಿ ಸಹ ಟೆಸ್ಟ್ ನಿವೃತ್ತಿಯನ್ನು ಘೋಷಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಮೂಲಕ ಈ ಘೋಷಣೆ ಮಾಡಿರುವ ಕೊಹ್ಲಿ, ತುಂಬು ಹೃದಯದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

2011ರ ಜೂನ್ 20ರಂದು ಟೆಸ್ಟ್ ಕ್ರಿಕೆಟ್ ಪ್ರವೇಶಿಸಿದ ಕೊಹ್ಲಿ, 123 ಪಂದ್ಯಗಳಲ್ಲಿ 30 ಶತಕ ಮತ್ತು 31 ಅರ್ಧಶತಕ ಗಳಿಸಿ 9230 ರನ್ ಗಳಿಸಿದ್ದಾರೆ. 2025ರ ಜನವರಿ 3ರಂದು ಕೊನೆಯ ಟೆಸ್ಟ್ ಆಡಿದ್ದರು. 2024ರ ಜೂನ್ 29ರಂದು ಟಿ-20 ರಿಂದ ನಿವೃತ್ತಿಯಾಗಿದ್ದರು. “ಚೇಸಿಂಗ್ ಮಾಸ್ಟರ್” ವಿರಾಟ್ ಈಗ ಏಕದಿನ ಪಂದ್ಯಗಳಿಗೆ ಮಾತ್ರ ಸೀಮಿತರಾಗಲಿದ್ದಾರೆ.

RELATED ARTICLES
- Advertisment -
Google search engine

Most Popular