Monday, May 12, 2025
Google search engine

Homeರಾಜ್ಯರಾಜ್ಯ ಸರ್ಕಾರಿ ನೌಕರರಿಗೆ ಮೇ 15 ರಿಂದ ವರ್ಗಾವಣೆ ಆರಂಭ

ರಾಜ್ಯ ಸರ್ಕಾರಿ ನೌಕರರಿಗೆ ಮೇ 15 ರಿಂದ ವರ್ಗಾವಣೆ ಆರಂಭ

ಬೆಂಗಳೂರು: 2025-26ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ಸಾಮಾನ್ಯ ವರ್ಗಾವಣೆಗೆ ಮೇ 15 ರಿಂದ ಜೂನ್ 14 ರವರೆಗೆ ಅವಕಾಶ ನೀಡಲು ಸರ್ಕಾರ ನಿರ್ಧರಿಸಿದೆ.

ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಿ ನೌಕರರ ಸಾಮಾನ್ಯ ವರ್ಗಾವಣೆ ಮಾರ್ಗಸೂಚಿಗಳನ್ನು ಹೊರಡಿಸಲು, ಪರಿಷ್ಕರಿಸಲು ಮತ್ತು ವಿಸ್ತರಿಸಲು ಮುಖ್ಯಮಂತ್ರಿಗಳಿಗೆ ಅಧಿಕಾರ ನೀಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ

ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ್, “2025-26ನೇ ಸಾಲಿನ ಸಾಮಾನ್ಯ ವರ್ಗಾವಣೆ ಮಾರ್ಗಸೂಚಿಗಳನ್ನು ಹೊರಡಿಸಲು, ಪರಿಷ್ಕರಿಸಲು ಮತ್ತು ವಿಸ್ತರಿಸಲು ಮುಖ್ಯಮಂತ್ರಿಗಳಿಗೆ ಅಧಿಕಾರ ನೀಡಲು ಸಚಿವ ಸಂಪುಟ ನಿರ್ಧರಿಸಿದೆ” ಎಂದು ಹೇಳಿದರು.

ಮೇ 15 ರಿಂದ ಜೂನ್ 14 ರವರೆಗೆ ‘ಗ್ರೂಪ್-ಎ’ ಮತ್ತು ‘ಗ್ರೂಪ್-ಬಿ’ ಕೇಡರ್ ಅಧಿಕಾರಿಗಳ ಸಾಮಾನ್ಯ ವರ್ಗಾವಣೆಯನ್ನು ಆಯಾ ಕೇಡರ್ಗಳ ಕಾರ್ಯನಿರತ ಕೇಡರ್ ಬಲದ ಶೇಕಡಾ 6 ಕ್ಕಿಂತ ಮೀರದಂತೆ ನಡೆಸಲು ಆಯಾ ಇಲಾಖಾ ಸಚಿವರಿಗೆ ಅಧಿಕಾರ. ಅದೇ ರೀತಿ ಗ್ರೂಪ್-ಸಿ ಮತ್ತು ಗ್ರೂಪ್-ಡಿ ನೌಕರರ ವರ್ಗಾವಣೆಗೆ ಸಂಬಂಧಿಸಿದಂತೆ ನೇಮಕಾತಿ ಅಧಿಕಾರಿಗಳಿಗೆ ಅಧಿಕಾರವನ್ನು ನೀಡಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ.

ಒಂದು ಸ್ಥಳದಲ್ಲಿ ಎರಡು ವರ್ಷ ಸೇವೆ ಪೂರ್ಣಗೊಳಿಸಿದ ಗ್ರೂಪ್-ಎ ಮತ್ತು ಗ್ರೂಪ್-ಬಿ ನೌಕರರು ಮತ್ತು ನಾಲ್ಕು ವರ್ಷ ಸೇವೆ ಪೂರ್ಣಗೊಳಿಸಿದ ‘ಗ್ರೂಪ್-ಸಿ’ ಮತ್ತು ‘ಗ್ರೂಪ್-ಡಿ’ ನೌಕರರು ವರ್ಗಾವಣೆಗೆ ಅರ್ಹರು. ‘ಎ’ ಮತ್ತು ‘ಬಿ’ ನೌಕರರ ವರ್ಗಾವಣೆ ಪ್ರಸ್ತಾಪವನ್ನು ಆಡಳಿತ ಇಲಾಖೆಯ ಮೂಲಕ ಸಚಿವರಿಗೆ ಸಲ್ಲಿಸಬೇಕು’ ಎಂದು ಸೂಚಿಸಿದರು.

RELATED ARTICLES
- Advertisment -
Google search engine

Most Popular