ಹುಣಸಗಿ: ಪಹಲ್ಗಾಮ್ ದಾಳಿಯಲ್ಲಿ ಮೃತ ಭರತ್ ಭೂಷಣ್ ಪತ್ನಿಯ ಹೇಳಿಕೆಗೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಸಂದೇಶದ ಮೇಲೆ ಇಬ್ಬರ ವಿರುದ್ಧ ಕೊಡೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಣಸಗಿ ತಾಲೂಕಿನ ರಾಜನಕೋಳೂರು ಗ್ರಾಮದ ರಸೂಲ್ ಬಾಬು ಹಾಗೂ ಮುಸ್ತಾಪ್ ಶೇಖ್ ಅಲಿ ಎಂಬವರು ಪಹಲ್ಗಾಮ್ ಘಟನೆ ಸಂಬಂಧಿಸಿದಂತೆ ಮೇ. 9 ರಂದು ಸ್ಟೇಟಸ್ ಹಾಕಿ ಎರಡು ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಭಾವನೆ ಹಾಗೂ ಪ್ರಚೋದನೆ ನೀಡಿದ್ದಾರೆ.
ಗ್ರಾಮದಲ್ಲಿ ವಾತಾವರಣ ಶಾಂತವಾಗಿದ್ದು, ಮುಂದೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಇಬ್ಬರು ಆರೋಪಿಗಳ ಮೇಲೆ ಬಿಎನ್ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.