ನವದೆಹಲಿ: ಉಗ್ರರೊಂದಿಗೆ ಉಗ್ರವಾದದ ವಿರುದ್ದ ಮಾತ್ರ ನಮ್ಮ ಹೋರಾಟ ,ಪಾಕ್ ಸೇನೆಯೊಂದಿಗೆ ಅಲ್ಲ. ನಾವು ನಡೆಸಿದ ಅಪರೇಷನ್ ಸಿಂಧೂರ ಯಶಸ್ವಿಯಾಗಿದೆ ಎಂದು ಭಾರತೀಯ ಸೇನಾಧಿಕಾರಿಗಳು ತಿಳಿಸಿದ್ದಾರೆ.
ನವದೆಹಲಿಯಲ್ಲಿ ಡಿಜಿಎಂಒ ಲೆಫ್ಟಿನಂಟ್ ಜನರಲ್ ರಾಜೀವ್ ಘಾಯ್, ಏರ್ ಮಾರ್ಷಲ್ ಎ.ಕೆ. ಭಾರ್ತಿ, ವೈಸ್ ಅಡ್ಮರಲ್ ಎಎನ್ ಪ್ರಮೋದ್ ಮೂರು ಸೇನಾಧಿಕಾರಿಗಳು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಪರೇಷನ್ ಸಿಂಧೂರ ಬಗ್ಗೆ ವಿವರಿಸಿದರು.
ಈ ಕುರಿತು ಮಾಹಿತಿ ನೀಡಿದ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಕಳೆದ ಕೆಲವು ವರ್ಷಗಳಲ್ಲಿ ಭಯೋತ್ಪಾದಕರ ಸ್ವರೂಪ ಬದಲಾಗಿದೆ. ಭಾರತದ ಹೋರಾಟ ಭಯೋತ್ಪಾದಕರ ವಿರುದ್ಧ, ಅವರ ಸೋಲಿಗೆ ಪಾಕಿಸ್ತಾನವೇ ಕಾರಣ. ನಾವು ಪಾಕ್ ಡ್ರೋಣ್‌ಗಳನ್ನು ತಂತ್ರಜ್ಞಾನದಿಂದ ತಡೆದು, ನೌಕಾ ಹಾಗೂ ಭೂ ಸೇನೆಯು ಗಡಿಗೆ ಪಾಕ್ ನಿಲುಕದಂತೆ ಬಿಗಿಯಾದ ಕಟ್ಟೆಚ್ಚರ ವಹಿಸಿತು. ಪಾಕಿಸ್ತಾನ ಮತ್ತೆ ದಾಳಿ ಮಾಡಿದರೆ ತಕ್ಕ ಪಾಠ ನೀಡಲಾಗುವುದು ಎಂದರು.
ಏರ್ ಮಾರ್ಷಲ್ ಎ.ಕೆ. ಭಾರ್ತಿ ಮಾತನಾಡಿ, ಪಾಕ್ ಸೇನೆಯು ಉಗ್ರರ ಪರ ಬ್ಯಾಟಿಂಗ್ ಮಾಡುತ್ತಿರುವುದು ವಿಷಾದಕರ. ಭಾರತ ಒಂಬತ್ತು ಉಗ್ರ ಶಿಬಿರಗಳನ್ನು ನಾಶಪಡಿಸಿದೆ. ಭಾರತೀಯ ಯುದ್ಧ ವ್ಯವಸ್ಥೆಗಳು ಶಕ್ತಿಯುತವಾಗಿದೆ ಎಂದು ಏರ್ ಮಾರ್ಷಲ್ ಎ.ಕೆ. ಭಾರ್ತಿ ಹೇಳಿದರು.
ನಮ್ಮ ಸೆನಾ ನೆಲ ಜನರನ್ನ ಗುರಿಯಾಗಿಸಿ ಪಾಕ್ ದಾಳಿ ಮಾಡಿದೆ. ನಮ್ಮ ತಡೆಗೋಡೆ ಭೇದಿಸಲು ಪಾಕ್ ವಿಫಲವಾಗಿದೆ. ಪಾಕ್ ಮತ್ತೆ ದಾಳಿ ಮಾಡಿದ್ರೆ ತಕ್ಕ ಪಾಠ. ಉಗ್ರರ ವಿರುದ್ದ ಭಾರತೀಯ . ಪಾಕ್ ಮತ್ತೆ ದಾಳಿ ಮಾಡಿದ್ರೆ ತಕ್ಕ ಪಾಠ. ಉಗ್ರರ ವಿರುದ್ದ ಭಾರತೀಯ ಸೇನೆ ಹೋರಾಟ ಮಾಡಿದೆ. ಪಾಕ್ ಉಗ್ರರ ಪರ ನಿಂತಿತ್ತು. ಈಗ ಪರಿಣಾಮ ಅನುಭವಿಸಿದೆ ಎಂದರು.
ಅಪರೇಷನ್ ಸಿಂಧೂರ ಯಶಸ್ವಿಯಾಗಿದ್ದು, ಪಾಕ್ 11 ವಾಯು ನೆಲೆಗಳನ್ನ ನಾಶ ಮಾಡಿದ್ದೇವೆ. ಯಾವುದೇ ಸಮಯದಲ್ಲೂ ದಾಳಿ ಎದುರಿಸಲು ಸಿದ್ದರಿದ್ದೇವೆ. ಪಾಕಿಸ್ತಾನ ಮತ್ತೆ ಕೆಣಕಿದರೆ ಸುಮ್ಮನೆ ಕೂರಲ್ಲ. ಭಾರತೀಯ ಏರ್ ಡಿಫೆನ್ಸ್ ಗೋಡೆಯಂತೆ ಕಾಪಾಡಿದೆ. ಸ್ವದೇಶಿ ನಿರ್ಮಿತ ಕ್ಷಿಪಣಿಯಿಂದ ಚೈನಾ ಕ್ಷಿಪಣಿ ಧ್ವಂಸ ಮಾಡಲಾಗಿದೆ ಎಂದು ಡಿಜಿಎಂಒ ರಾಜೀವ್ ಘಾಯ್ ತಿಳಿಸಿದರು.
ಹಾಗೆಯೇ ಪಾಕ್ ಸುಳ್ಳು ಪ್ರಚಾರ ನಿರೀಕ್ಷಿತ. ಅಪರೇಷನ್ ಸಿಂಧೂರದ ತಾಂತ್ರಿಕ ವಿಷಯಗಳನ್ನ ಹೇಳಲು ಆಗಲ್ಲ. ನಮ್ಮ ಕೆಲಸ ನಾವು ಮುಗಿಸಿದ್ದೇವೆ. ನಮ್ಮ ಹೋರಾಟ ಉಗ್ರರು ಮತ್ತು ಉಗ್ರವಾದದ ವಿರುದ್ದ ಪಾಕಿಸ್ತಾನದಲ್ಲಾದ ನಷ್ಟಕ್ಕೆ ಪಾಕ್ ಸೇನೆಯೇ ಕಾರಣ ಎಂದು ಮೂವರು ಸೇನಾಧಿಕಾರಿಗಳು ತಿಳಿಸಿದರು.