Tuesday, May 13, 2025
Google search engine

Homeರಾಜ್ಯಸುದ್ದಿಜಾಲಶಾಸಕ ಡಿ. ರವಿಶಂಕರ್ 49ನೇ ಹುಟ್ಟುಹಬ್ಬ: ಸಮಾಜಸೇವಾ ಕಾರ್ಯಗಳೊಂದಿಗೆ ಆಚರಣೆ

ಶಾಸಕ ಡಿ. ರವಿಶಂಕರ್ 49ನೇ ಹುಟ್ಟುಹಬ್ಬ: ಸಮಾಜಸೇವಾ ಕಾರ್ಯಗಳೊಂದಿಗೆ ಆಚರಣೆ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಕ್ಷೇತ್ರದ ಶಾಸಕ ಡಿ.ರವಿಶಂಕರ್ ಅವರ 49 ನೇ ವರ್ಷದ ಹುಟ್ಟು ಹಬ್ಬವನ್ನು ವಿವಿಧ ಸಮಾಜ ಸೇವಾ ಕಾರ್ಯಗಳೊಂದಿಗೆ ಆಚರಿಸಲಾಯಿತು. ಇಲ್ಲಿನ ಮಲೆ ಮಹದೇಶ್ವರ ಸ್ವಾಮಿ ದೇವಲಯದಲಿ ಪೂಜೆ ಸಲ್ಲಿಸಿ ಬಂದಂತಹ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

ಆನಂತರ ಸಾರ್ವಜನಿಕ ಆಸ್ಪತ್ರೆ ಮತ್ತು ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರಲ್ಲದೆ ಪುರಸಭೆ ವೃತ ಸೇರಿದಂತೆ ವಿವಿಧ ವೃತಗಳಲ್ಲಿ ಶಾಸಕರ ಅಭಿಮಾನಿಗಳು ಬೃಹತ್ ಗಾತ್ರದ ಕೇಕ್ ಕತ್ತರಿಸಿ ಸಾರ್ವಜನಿಕರಿಗೆ ಲಘು ಉಪಹಾರ ವಿತರಿಸಿದರು.

ಈ ವೇಳೆ ಪುರಸಭೆ ಅಧ್ಯಕ್ಷ ಶಿವುನಾಯಕ್ ಮಾತನಾಡಿ ಶಾಸಕ ಡಿ.ರವಿಶಂಕರ್ ಅವರ ಹುಟ್ಟು ಹಬ್ಬದವನ್ನು ಪ್ರತಿ ವರ್ಷದಂತೆ ಈ ಬಾರಿಯೂ ಸಮಾಜ ಸೇವಾ ಕಾರ್ಯಗಳೊಂದಿಗೆ ಆಚರಿಸಲಾಗಿದ್ದು ವಿವಿದ ದೇವಾಲಯ ಗಳಲ್ಲಿ ಪೂಜೆ ಸಲ್ಲಿಸಿ ಶಾಸಕರಿಗೆ ಆಯಸ್ಸು ಆರೋಗ್ಯ ಕರುಣಿಸಿ ಹೆಚ್ಚಿನ ರಾಜಕೀಯ ಸ್ಥಾನಮಾನ ದೊರೆಯುವಂತೆ ಕೋರಿದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ಮಾಜಿ ಅಧ್ಯಕ್ಷ ವೈ.ಎಸ್.ಕುಮಾರ್, ಪುರಸಭೆ ಸದಸ್ಯರಾದ ಕೋಳಿಪ್ರಕಾಶ್, ನಟರಾಜು, ಶಂಕರ್ ಸ್ವಾಮಿ, ಅಶ್ವಿನಿಪುಟ್ಟರಾಜು, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ, ಅಡಗೂರು ಗ್ರಾ.ಪಂ.ಅಧ್ಯಕ್ಷ ಬೀರೇಗೌಡ, ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜು, ಮುಖಂಡರಾದ. ಹೆಚ್.ಹೆಚ್.ನಾಗೇಂದ್ರ, ಡಿ.ಜೆ.ಬಸವರಾಜು, ಮಿರ್ಲೆನಾಗರಾಜು, ಸಿ.ಟಿ.ಶಿವರಾಜು, ಮಂಚನಹಳ್ಳಿಧನು, ವೆಂಕಟೇಶ್, ಸಂಜಯ್ ತಿಲಕ್, ಕುಳ್ಳಮೋಹನ್, ಕೆಂಚಿಮಂಜು, ಅಪ್ಪಿ, ಹೊಯ್ಸಳ, ಗೌತಮ್ ಜಾಧವ್, ಸುಮಂತ್, ಧರ್ಮ,ಸಿ.ಶಂಕರ್, ವಕೀಲ ಶಿವರಾಜು ಸೇರಿದಂತೆ ನೂರಾರು ಮಂದಿ ಕಾರ್ಯಕರ್ತರು ಹಾಜರಿದ್ದರು.

RELATED ARTICLES
- Advertisment -
Google search engine

Most Popular