Wednesday, May 14, 2025
Google search engine

HomeUncategorizedರಾಷ್ಟ್ರೀಯಆಪರೇಷನ್ ಸಿಂಧೂರ ಭಯೋತ್ಪಾದನೆಗೆ ಭಾರತ ಎಳೆದಿರುವ ಸ್ಪಷ್ಟ ಲಕ್ಷ್ಮಣ ರೇಖೆ: ಮೋದಿ

ಆಪರೇಷನ್ ಸಿಂಧೂರ ಭಯೋತ್ಪಾದನೆಗೆ ಭಾರತ ಎಳೆದಿರುವ ಸ್ಪಷ್ಟ ಲಕ್ಷ್ಮಣ ರೇಖೆ: ಮೋದಿ

ಪಂಜಾಬ್: ಪ್ರಧಾನಮಂತ್ರಿ ಮೋದಿ ಆದಂಪುರ ವಾಯುನೆಲೆಗೆ ಭೇಟಿ ನೀಡಿ ಯೋಧರನ್ನುದ್ದೇಶಿಸಿ ಮಾತನಾಡಿದರು. ಭಯೋತ್ಪಾದಕರ ವಿರುದ್ಧ ಭಾರತೀಯ ವಾಯುಪಡೆಯ ದಾಳಿ ಸಮರ್ಥವಾಗಿದ್ದು, ಭಾರತ ಭಯೋತ್ಪಾದನೆಗೆ ಲಕ್ಷ್ಮಣ ರೇಖೆ ಎಳೆದಿದೆ ಎಂದರು. ಮತ್ತೆ ದಾಳಿ ನಡೆದರೆ, ಮತ್ತಷ್ಟು ಘೋರ ಪ್ರತಿಸ್ಪಂದನ ನೀಡಲಾಗುವುದು ಎಂದು ಹೇಳಿದರು.

ಆಪರೇಷನ್ ಸಿಂಧೂರದ ಯಶಸ್ಸು ಪ್ರತಿಯೊಬ್ಬ ಯೋಧನಿಗೂ ಸಲ್ಲುತ್ತದೆ. ಯುದ್ಧಭೂಮಿಯಲ್ಲಿ “ಭಾರತ್ ಮಾತಾ ಕಿ ಜೈ” ಘೋಷಣೆಯಿಂದ ಶತ್ರುಗಳನ್ನು ಭಯಭೀತಗೊಳಿಸಲಾಗಿದೆ. ಭಾರತೀಯ ವಾಯುಪಡೆ ಪಾಕಿಸ್ತಾನಕ್ಕೆ ತನ್ನ ಶಕ್ತಿಯನ್ನು ತೋರಿಸಿದೆ.

“ಭಾರತ್ ಮಾತಾ ಕಿ ಜೈ” ಕೇವಲ ಘೋಷಣೆ ಅಲ್ಲ, ಅದು ಜನರ ಆತ್ಮದ ಘೋಷಣೆ. ಯೋಧರ ಪರಾಕ್ರಮ ಭವಿಷ್ಯದ ಪೀಳಿಗೆಗೆ ಸ್ಫೂರ್ತಿಯಾಗಿದೆ. ಆಪರೇಷನ್ ಸಿಂಧೂರ ಪ್ರಪಂಚದಾದ್ಯಂತ ಪ್ರತಿಧ್ವನಿಸಿದೆ.

ಭಾರತದ ಶಕ್ತಿ ಮತ್ತು ಸಾಮರ್ಥ್ಯವನ್ನು ನೋಡುವ ಮೂಲಕ ತಮ್ಮ ಜೀವನವು ಧನ್ಯವಾಗಿದೆ. ನಮ್ಮ ಸೇನೆಯ ಪರಾಕ್ರಮ ಭವಿಷ್ಯದ ಪೀಳಿಗೆಗೆ ಸ್ಫೂರ್ತಿಯಾಗಿದೆ. ಎಲ್ಲಾ ವೀರ ಸೈನಿಕರಿಗೆ ನನ್ನ ನಮನಗಳು. ಆಪರೇಷನ್ ಸಿಂಧೂರ ಘೋಷಣೆ ಪ್ರಪಂಚದಾದ್ಯಂತ ಪ್ರತಿಧ್ವನಿಸಿತು. ಸೇನೆಯು ದೇಶದ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

RELATED ARTICLES
- Advertisment -
Google search engine

Most Popular