ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ಕಲಾವಿದರ ಹೆಸರು ಹಾಗೂ ಫೋಟೋಗಳನ್ನು ದುರುಪಯೋಗಪಡಿಸಿಕೊಂಡು ಹಣದ ದೋಚಾಟ ನಡೆಯುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ, ನಟಿ ಮತ್ತು ಮಾಜಿ ಬಿಗ್ ಬಾಸ್ ಸ್ಪರ್ಧಿ ನಮ್ರತಾ ಗೌಡ ಇನ್‌ಸ್ಟಾಗ್ರಾಮ್‌ನಲ್ಲಿ ಕಿರುಕುಳ ಅನುಭವಿಸಿದ್ದಾರೆ.
ರೋಷನ್ ಎಂಬಾತನು ‘Rocky.g43’ ಎಂಬ ಖಾತೆಯಿಂದ ನಮ್ರತಾಗೆ ಪದೇ ಪದೇ ಪೇಯ್ಡ್ ಡೇಟಿಂಗ್ ಕುರಿತ ಸಂದೇಶಗಳನ್ನು ಕಳುಹಿಸಿದ್ದಾನೆ. ತನ್ನ ಬಳಿ ರಾಜಕಾರಣಿಗಳು ಹಾಗೂ ವಿಐಪಿಗಳ ಸಂಪರ್ಕವಿದೆ ಎಂದು ಹೇಳಿ, ಅವರುಗಾಗಿ ಪೇಯ್ಡ್ ಡೇಟಿಂಗ್ ವ್ಯವಸ್ಥೆ ಮಾಡುತ್ತೇನೆ ಎಂದು ಸಂದೇಶದಲ್ಲಿ ಉಲ್ಲೇಖಿಸಿದ್ದಾನೆ. namrata ನಿಮಗೆ ಆಸಕ್ತಿ ಇದ್ದರೆ ಹಣ ಹೇಳಿ, ಯಾವುದೇ ವೈಯಕ್ತಿಕ ಮಾಹಿತಿ ನೀಡಬೇಕಾಗಿಲ್ಲ ಎಂದು ಆತ ತಿಳಿಸಿದ್ದಾನೆ.
ರೋಷನ್‌ನ ಪ್ರೊಫೈಲ್ ಫೋಟೋದಲ್ಲಿ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹರೊಂದಿಗೆ ಇರುವ ಚಿತ್ರವಿದೆ. ಈ ವಿಚಾರವಾಗಿ ಕೋಪಗೊಂಡ ನಟಿ ನಮ್ರತಾ, ಆತ ಕಳುಹಿಸಿದ್ದ ಸಂದೇಶದ ಸ್ಕ್ರೀನ್‌ಶಾಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು “ಸಾಕಿನ್ನು ನಿಲ್ಲಿಸು” ಎಂಬ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.
ಈ ರೀತಿಯ ಸಂದೇಶಗಳು ಕಿರುತೆರೆ ನಟಿ ಹಾಗೂ ರಿಯಾಲಿಟಿ ಶೋ ಕಲಾವಿದರಿಗೆ ಸಾಮಾನ್ಯವಾಗುತ್ತಿದ್ದು, ಕೆಲವರು ಸೈಬರ್ ಕ್ರೈಂಗೆ ದೂರು ನೀಡುತ್ತಾರೆ, ಇನ್ನು ಕೆಲವರು ಬ್ಲಾಕ್ ಮಾಡಿ ಮೌನವಾಗುತ್ತಾರೆ.