ಶ್ರೀನಗರ: ಅಪರೇಷನ್ ಸಿಂಧೂರ ಯಶಸ್ಸಿನ ನಂತರ, ಶ್ರೀನಗರಕ್ಕೆ ಭೇಟಿ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾರತೀಯ ಯೋಧರ ಶೌರ್ಯವನ್ನು ಹೊಗಳಿದರು. ಕಳೆದ ವಾರ ಪಂಜಾಬ್‌ನ ಆದಂಪುರ ವಾಯುನೆಲೆಗೆ ಪ್ರಧಾನಿ ಮೋದಿ ಭೇಟಿ ನೀಡಿದ ಬೆನ್ನಲ್ಲೇ, ರಾಜನಾಥ್ ಸಿಂಗ್ ಇಂದು ಶ್ರೀನಗರ ಸೇನಾ ಕಚೇರಿಗೆ ಭೇಟಿ ನೀಡಿದರು.
ಸೈನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಪಹಲ್ಗಾಮ್ ದಾಳಿಗೆ ತಕ್ಕ ಪ್ರತೀಕಾರವಾಗಿದೆ. ಉಗ್ರರಿಗೆ ಪಾಕಿಸ್ತಾನ ಮೂಲಕ ಕಠಿಣ ಸಂದೇಶ ಕಳವಳವಿಲ್ಲದೆ ರವಾನೆಯಾಗಿದೆ. ಇಡೀ ವಿಶ್ವವು ಈ ದಾಳಿಯನ್ನ ಖಂಡಿಸಿದೆ ಎಂದರು.
“ಅಪರೇಷನ್ ಸಿಂಧೂರ ನಮ್ಮ ಪ್ರತಿಜ್ಞೆ. ಅದು ಹೆಸರಲ್ಲ, ಅದು ಎಚ್ಚರಿಕೆಯ ಸಂದೇಶ. ನಮ್ಮ ಸೇನೆ ಭಯೋತ್ಪಾದಕರಿಗೆ ತಕ್ಕ ಪಾಠ ಕಲಿಸಿದೆ,” ಎಂದು ಅವರು ಹೇಳಿದರು.
ದೇಶದ ಪರವಾಗಿ ಯೋಧರಿಗೆ ಅಭಿನಂದನೆ ಸಲ್ಲಿಸಿದ ಸಚಿವರು, ಅವರ ಬದ್ಧತೆಯನ್ನು ಮೆಚ್ಚಿದರು.