ವರದಿ: ವಿನಯ್ ದೊಢ್ಡಕೊಪ್ಪಲು
ಕೆ.ಆರ್.ನಗರ:ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಸ್ಥಳೀಯ ಶಾಸಕರ ಸಮ್ಮುಖದಲ್ಲಿ ಕಳೆದ ೨೦ ವರ್ಷಗಳ ನಂತರ ಸರ್ಕಾರದ ಸವಲತ್ತುಗಳ ವಿತರಣೆ ಮತ್ತು ೪೦೦ ಕೋಟಿ ರೂಗಳ ಅಭಿವೃದ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಕಾರ್ಯಕ್ರಮ ಮೇ.೨೩ರ ಶುಕ್ರವಾರ ಪಟ್ಟಣದ ಪುರಸಭೆಯ ಬಯಲುರಂಗ ಮಂದಿರದಲ್ಲಿ ನಡೆಯಲಿದೆಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಇಲ್ಲಿನ ಸಂಗೊಳ್ಳಿ ರಾಯಣ್ಣ ಸಮುದಾಯ ಭವನದಲ್ಲಿ ನಡೆದ ಸಮಾರಂಭದ ಪೂರ್ವಭಾವಿ ಸಭೆಯಅಧ್ಯಕ್ಷತೆ ವಹಿಸಿ ಮಾತನಾಡಿದಅವರುಅಂದು ಬೆಳಗ್ಗೆ ೧೧ಕ್ಕೆ ನಡೆಯುವಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತುಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ವಿವಿಧಇಲಾಖೆಯ ಸಚಿವರುಗಳು ಆಗಮಿಸಲಿದ್ದು ಪಕ್ಷದ ಮುಖಂಡರುಗಳು ತಮ್ಮತಮ್ಮಗ್ರಾಮಗಳಿಂದ ಹೆಚ್ಚು ಜನರನ್ನುಕರೆತಂದುಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದರು.
ಮೇ.೨೦ಕ್ಕೆ ಸಿದ್ದರಾಮಯ್ಯನವರ ನೇತೃತ್ವದಸರ್ಕಾರ ಬಂದುಎರಡು ವರ್ಷಗಳು ತುಂಬಿದ್ದುಜನರ ನಿರೀಕ್ಷೆಗೆತಕ್ಕಂತೆಅಭಿವೃದ್ದಿ ಕೆಲಸಗಳಿಗೆ ಅನುದಾನ ನೀಡಲು ಸಾಧ್ಯವಾಗಿರಲಿಲ್ಲ ಇದಕ್ಕೆಕಾರಣಐದುಗ್ಯಾರಂಟಿ ಯೋಜನೆಗಳಿಗೆ ಹಣ ಮೀಸಲಿರಿಸುವುದರಜತೆಗೆ ಕಳೆದ ಬಿಜೆಪಿ ಸರ್ಕಾರದಲ್ಲಿಅನುಮೋದನೆಗೊಂಡ ಕಾಮಗಾರಿಗಳಿಗೆ ಹಣ ನೀಡಬೇಕಾಗಿತ್ತುಎಂದು ಮಾಹಿತಿ ನೀಡಿದರು. ಐದುಗ್ಯಾರಂಟಿ ಯೋಜನೆಗಳಿಂದ ಕ್ಷೇತ್ರದ ಸಾವಿರಾರು ಮಂದಿಗೆ ಸಾಕಷ್ಟು ಅನುಕೂಲವಾಗಿದ್ದುಇದರಜತೆಗೆಎರಡು ತಾಲೂಕುಗಳ ಅಭಿವೃದ್ದಿಗಾಗಿಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರಿಂದ ೩೮೭.೧೨ ಕೋಟಿ ರೂಗಳನ್ನು ನಾನಾಕಾಮಗಾರಿಗಳಿಗಾಗಿ ಸರ್ಕಾರ ಬಿಡುಗಡೆ ಮಾಡಿದ್ದು ಈ ಎಲ್ಲಾ ಕಾಮಗಾರಿಗಳಿಗೂ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಕಾಮಗಾರಿಗಳು ಮೇ.೨೩ರ ನಂತರಆರAಭವಾಗಲಿದೆಎAದು ಹೇಳಿದರು.
ಕೆ.ಆರ್.ನಗರ ವಿಧಾನ ಸಭಾಕ್ಷೇತ್ರದಲ್ಲಿ ನಡೆಯುವ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರುಗಳು ಹೆಚ್ಚು ಜನರನ್ನುಕರೆತರುವ ಮೂಲಕ ಯಶಸ್ವಿಗೆ ಸಹಕಾರ ನೀಡಬೇಕೆಂದುಕೋರಿದ ಶಾಸಕ ಡಿ.ರವಿಶಂಕರ್ ಮುಂದಿನ ಮೂರು ವರ್ಷಗಳ ಅವಧಿಯಲ್ಲಿಇನ್ನಷ್ಟು ಅಭಿವೃದ್ದಿಯ ಪರ್ವ ಪ್ರಾರಂಭವಾಗಲಿದೆಎAದು ಭರವಸೆ ನೀಡಿದರು. ಚುನಾವಣಾ ಪೂರ್ವದಲ್ಲಿ ಪಕ್ಷದ ವತಿಯಿಂದ ನಡೆಸಲಾದ ಜನಾಶೀರ್ವಾದ ಯಾತ್ರೆ ಸಂದರ್ಭದಲ್ಲಿಕ್ಷೇತ್ರದಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸಲುನಾನು ಬದ್ದನಾಗಿದ್ದು, ಪಕ್ಷದ ಮುಖಂಡರು ಮತ್ತುಕಾರ್ಯಕರ್ತರಅಭಿಪ್ರಾಯ ಪಡೆದುಎಲ್ಲಾ ಗ್ರಾಮಗಳಿಗೆ ಅನುದಾನ ಹಂಚಿಕೆ ಮಾಡುವುದರಜತೆಗೆ ಸಾಲಿಗ್ರಾಮತಾಲೂಕನ್ನು ಸಮಗ್ರವಾಗಿಅಭಿವೃದ್ದಿ ಪಡಿಸಲು ನಿರ್ಧರಿಸಲಾಗಿದೆಎಂದು ತಿಳಿಸಿದರು.
ಮಿರ್ಲೆ ಮತ್ತು ಭೇರ್ಯಗ್ರಾಮವನ್ನು ಸಾಲಿಗ್ರಾಮದ ಹೋಬಳಿ ಕೇಂದ್ರವನ್ನಾಗಿ ಮಾಡಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ, ಮಿರ್ಲೆ ಸೇರಿದಂತೆ ಸುತ್ತಮುತ್ತಲ ಗ್ರಾಮದಕೆರೆಕಟ್ಟೆ ತುಂಬಿಸಿ ರೈತರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಏತನೀರಾವರಿಯೋಜನೆಗಾಗಿ ೬೦ ಕೋಟಿ ರೂಗಳಿಗೆ ಸಚಿವ ಸಂಪುಟದಲ್ಲಿಅನುಮೋದನೆದೊರೆತಿದೆಎAದ ಶಾಸಕರುಕೆ.ಆರ್.ನಗರತಾಲೂಕಿನ ಸೌತನಹಳ್ಳಿಗ್ರಾಮ ಸೇರಿದಂತೆಸುತ್ತಮುತ್ತಲ ಗ್ರಾಮಗಳ ರೈತರಜಮೀನಿಗೆ ಸರಾಗವಾಗಿ ನೀರು ಹರಿಸುವ ಸಲುವಾಗಿ ನಾಲೆಗಳ ಆಧುನೀಕರಣ ಮಾಡಲುನೀರಾವರಿಇಲಾಖೆಯಿಂದ ೪೫ ಕೋಟಿರೂ ಮಂಜೂರಾಗಿದೆಎAದು ಹೇಳಿದರು.
ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯದೊಡ್ಡಸ್ವಾಮೇಗೌಡ ಮಾತನಾಡಿ ಮುಂದಿನ ದಿನಗಳಲ್ಲಿ ಜಿಲ್ಲಾ ಮತ್ತುತಾಲೂಕು, ಗ್ರಾಮ ಪಂಚಾಯಿತಿ ಹಾಗೂ ಪುರಸಭೆಯಚುನಾವಣೆ ನಡೆಯಲಿದ್ದು ಈ ಎಲ್ಲಾ ಆಕಾಂಕ್ಷಿಗಳು ಮತ್ತು ಮುಂಜೂಣಿ ಘಟಕಗಳ ನಾಯಕರುಗಳು ಹೆಚ್ಚು ಜನರನ್ನುಕರೆತಂದು ಮುಖ್ಯಮಂತ್ರಿ ಸೇರಿದಂತೆ ಪಕ್ಷದ ಮುಖಂಡರುಗಳ ಮನಗೆಲ್ಲಬೇಕುಎಂದು ಸಲಹೆ ನೀಡಿದರು.
ಪುರಸಭೆಅಧ್ಯಕ್ಷ ಶಿವುನಾಯಕ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಾರ್ಚಹಳ್ಳಿಶಿವರಾಮು, ಮುಖಂಡರಾದ ಕಲ್ಲಹಳ್ಳಿಶ್ರೀನಿವಾಸ್, ಸಿ.ಪಿ.ರಮೇಶ್, ಎಸ್.ಪಿ.ತಮ್ಮಯ್ಯ, ಎ.ಆರ್.ಕಾಂತರಾಜು, ಮಹಿಳಾ ಘಟಕದಅಧ್ಯಕ್ಷರಾದ ಲತಾರವಿಶಂಕರ್,ರಾಣಿಬಾಲಶAಕರ್,ಬ್ಲಾಕ್ಕಾAಗ್ರೆಸ್ಅಧ್ಯಕ್ಷರಾದಎA.ಎಸ್.ಮಹದೇವ್, ಉದಯಶಂಕರ್, ನಗರಾಧ್ಯಕ್ಷಎಂ.ಜೆ.ರಮೇಶ್ ಮಾತನಾಡಿದರು.
ಕುರಿಮತ್ತು ಮೇಕೆ ಅಭಿವೃದ್ದಿ ನಿಗಮದ ರಾಜ್ಯಾಧ್ಯಕ್ಷ ಎಂ.ರಮೇಶ್, ತಾಲೂಕು ಪಂಚಾಯಿತಿ ಮಾಜಿಅಧ್ಯಕ್ಷರಾದ ಹಾಡ್ಯಮಹದೇವಸ್ವಾಮಿ, ಬಿ.ಟಿ.ಮಹದೇವ್, ಬೋರೇನಾಗರಾಜು, ಮಾಜಿ ಸದಸ್ಯರಾದ ಹರಿಣಿಪ್ರಕಾಶ್, ಎ.ಟಿ.ಗೋವಿಂದೇಗೌಡ, ಪುರಸಭೆ ಸ್ಥಾಯಿ ಸಮಿತಿಅಧ್ಯಕ್ಷ ಸಿ.ಶಂಕರ್, ಶಂಕರ್‌ಸ್ವಾಮಿ, ಮುಖಂಡರಾದಜಿ.ಎಸ್.ವೆAಕಟೇಶ್, ವೈ.ಎಸ್.ಜಯಂತ್, ಪ್ರೇಮಶಿವಣ್ಣ, ಪುಟ್ಟಸ್ವಾಮಾಚಾರ್, ಹೆಚ್.ಹೆಚ್.ನಾಗೇಂದ್ರ, ಲಿಂಗಪ್ಪ, ಹೆಚ್.ಪಿ.ಪ್ರಶಾಂತ್, ಶಾಂತಿರಾಜ್, ಶೇಖರ್, ರಾಮಚಾರಿ, ಸಿದ್ದಯ್ಯ, ನೀಲಕಂಠೇಗೌಡಮತ್ತಿತರರು ಹಾಜರಿದ್ದರು.