Wednesday, May 21, 2025
Google search engine

Homeಸ್ಥಳೀಯಅಂತರ ರಾಜ್ಯ ಸರಗಳ್ಳರ ಬಂಧನ: ಚಿನ್ನದ ಒಡವೆಗಳು ವಶ

ಅಂತರ ರಾಜ್ಯ ಸರಗಳ್ಳರ ಬಂಧನ: ಚಿನ್ನದ ಒಡವೆಗಳು ವಶ

ಮೈಸೂರು : ನಗರ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ನಡೆದ ಸರಗಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಲಷ್ಕರ್ ಠಾಣೆ ಪೊಲೀಸರು ಇಬ್ಬರು ಅಂತರರಾಜ್ಯ ಆರೋಪಿಗಳು ಸೇರಿದಂತೆ ಒಟ್ಟು ಮೂವರು ಆರೋಪಿಗಳನ್ನು ದಸ್ತಗಿರಿ ಮಾಡಿ ಆರೋಪಿಗಳಿಂದ ಒಟ್ಟು ರೂ. ೧೭,೦೦,೦೦೦ ಮೌಲ್ಯದ ಒಟ್ಟು ೧೭೦ ಗ್ರಾಂ ತೂಕದ ೪ ಚಿನ್ನದ ಸರಗಳನ್ನು ವಶಪಡಿಸಿಕೊಂಡಿರುತ್ತಾರೆ.

ಈ ಪತ್ತೆ ಕಾರ್ಯದ ಸಂಬಂಧ ಲಷ್ಕರ್ ಠಾಣೆಯ ೩ ಹಾಗೂ ದೇವರಾಜ ಠಾಣೆಯ ೧ ಪ್ರಕರಣಗಳು ಪತ್ತೆಯಾಗಿರುತ್ತದೆ. ಈ ಪತ್ತೆ ಕಾರ್ಯವನ್ನು ನಗರದ ಕೇಂದ್ರಸ್ಥಾನ, ಅಪರಾಧ ಮತ್ತು ಸಂಚಾರ ವಿಭಾಗದ ಡಿ.ಸಿ.ಪಿ. ಅವರ ಮಾರ್ಗದರ್ಶನದಲ್ಲಿ ದೇವರಾಜ ವಿಭಾಗದ ಎ.ಸಿ.ಪಿ. ಅವರ ಉಸ್ತುವಾರಿಯಲ್ಲಿ ಲಷ್ಕರ್ ಪೊಲೀಸ್ ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್, ಪಿ.ಎಸ್.ಐ. ಹಾಗೂ ಸಿಬ್ಬಂದಿಗಳು ಮಾಡಿರುತ್ತಾರೆ.

RELATED ARTICLES
- Advertisment -
Google search engine

Most Popular