ರಾಮನಗರ:ರಾಮನಗರದ ನಗರ ಆರೋಗ್ಯ ಕೇಂದ್ರ ಮೆಹಬೂಬ್‌ನಗರ ವ್ಯಾಪ್ತಿಗೆ ಸೇರಿದ ರಾಮನಗರ ಟೌನಿನ ದ್ಯಾವರಸೇಗೌಡನದೊಡ್ಡಿ ಗ್ರಾಮಕ್ಕೆ ಡಬ್ಲೂ.ಹೆಚ್.ಒ ಸಂಸ್ಥೆಯ ಎಸ್.ಎಂ.ಒ ಡಾ. ನಾಗರಾಜು ಅವರು ಭೇಟಿನೀಡಿ ತೀವ್ರತರವಾದ ಮಿಷನ್ ಇಂದ್ರಧನುಷ್ ಅಭಿಯಾನದ ಸಮೀಕ್ಷಾ ಕಾರ್ಯಕ್ಕೆ ಸಂಬoಧಿಸಿದoತೆ ಮನೆ-ಮನೆ ಭೇಟಿಮಾಡಿ ಪರಿಶೀಲಿಸಿ ಸಮರ್ಪಕವಾಗಿ ಸಮೀಕ್ಷಾ ಕಾರ್ಯ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿಯಲ್ಲಿ ನಿಯಮಿತವಾಗಿ ನೀಡಲಾಗುವ ಲಸಿಕೆಗಳಿಂದ ವಂಚಿತರಾದ ಗರ್ಭಿಣಿ ಮಹಿಳೆಯರು ಮತ್ತು 0- 55 ವರ್ಷದ ಮಕ್ಕಳಿಗೆ ತೀವ್ರತರವಾದ ಮಿಷನ್ ಇಂದ್ರಧನುಷ್ ಅಭಿಯಾನವನ್ನು ಹಮ್ಮಿಕೊಂಡು ಲಸಿಕೆ ನೀಡುವುದು ಮುಖ್ಯ ಉದ್ದೇಶವಾಗಿದ್ದು. ಆರೋಗ್ಯ ಇಲಾಖೆ ವತಿಯಿಂದ ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಸಮೀಕ್ಷೆ ಮಾಡುವ ಸಂದರ್ಭದಲ್ಲಿ ಸಾರ್ವಜನಿಕರು ಸಂಪೂರ್ಣ ಮಾಹಿತಿ ನೀಡಿ ತೀವ್ರತರವಾದ ಮಿಷನ್ ಇಂದ್ರಧನುಷ್ ಅಭಿಯಾನ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್. ಗಂಗಾಧರ್ ಅವರು ಮಾತನಾಡಿ, ತೀವ್ರತರವಾದ ಮಿಷನ್ ಇಂದ್ರಧನುಷ್ ಅಭಿಯಾನದ ಸಮೀಕ್ಷೆ ಕಾರ್ಯ ಮುಗಿದ ನಂತರ 2023 ರಲ್ಲಿ 1ನೇ ಸುತ್ತು ಆಗಸ್ಟ್ – 7 ರಿಂದ 12, 2ನೇ ಸುತ್ತು ಸೆಪ್ಟೆಂಬರ್-11 ರಿಂದ 16, 3ನೇ ಸುತ್ತು ಅಕ್ಟೋಬರ್-09 ರಿಂದ 14 ರಂತೆ ನಿರ್ಧಿಷ್ಟ 6 ದಿನಗಳಂದು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ದಿನವನ್ನು ಒಳಗೊಂಡoತ್ತೆ ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ 3 ಸುತ್ತುಗಳಲ್ಲಿ ತೀವ್ರತರವಾದ ಮಿಷನ್ ಇಂದ್ರಧನುಷ್ ಅಭಿಯಾನವನ್ನು ನಡೆಸಲಾಗುವುದು. ಸಮೀಕ್ಷೆಯ ವೇಳೆಯಲ್ಲಿ ಕಂಡುಬoದ ವಂಚಿತರಾದ ಗರ್ಭಿಣಿ ಮಹಿಳೆಯರು ಹಾಗೂ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಕೊಡಿಸಲು ಪೋಷಕರು ಸಹಕರಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಎಸ್.ಎಂ.ಒ ಡಾ. ನಾಗರಾಜು, ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಹರ್ಷಿತ್, ಆಶಾ ಕಾರ್ಯಾಕರ್ತೆ ನೇತ್ರಾವತಿ, ಹಾಗೂ ಸಾರ್ವಜನಿಕರು ಹಾಜರಿದ್ದರು.