Saturday, May 24, 2025
Google search engine

Homeಅಪರಾಧಕಾನೂನುವಿದೇಶಿ ಬಾತುಕೋಳಿ ಸಾಕಿದ ಆರೋಪ : ನಟ ದರ್ಶನ್, ಪತ್ನಿ ವಿಜಯಲಕ್ಷ್ಮಿಗೆ ಕೋರ್ಟ್ ನಿಂದ ಸಮನ್ಸ್

ವಿದೇಶಿ ಬಾತುಕೋಳಿ ಸಾಕಿದ ಆರೋಪ : ನಟ ದರ್ಶನ್, ಪತ್ನಿ ವಿಜಯಲಕ್ಷ್ಮಿಗೆ ಕೋರ್ಟ್ ನಿಂದ ಸಮನ್ಸ್

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಅಲೆದಾಡುತ್ತಿರುವ ಚಿತ್ರನಟ ದರ್ಶನ್​ ಗೆ ಮತ್ತೊಂದು ಪ್ರಕರಣದಲ್ಲಿ ಕೋರ್ಟ್‌ ನಿಂದ ಸಮನ್ಸ್ ಜಾರಿ ಆಗಿದೆ. ತಮ್ಮ ಮೈಸೂರು ಫಾರಂ ಹೌಸ್ ​ನಲ್ಲಿ ವಿದೇಶಿ ಬಾತುಕೋಳಿ ಸಾಕಿದ್ದ ಪ್ರಕರಣಕ್ಕೆ  ಸಂಬಂಧಿಸಿದಂತೆ ದರ್ಶನ್‌ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ಅವರಿಗೆ ಕೋರ್ಟ್‌ ಸಮನ್ಸ್ ಜಾರಿ ಮಾಡಿದೆ.

ತಮ್ಮ ತೋಟದಲ್ಲಿ ಬಾರ್‌ ಹೆಡೆಡ್‌ ಗೂಸ್‌ ಎಂಬ ತಳಿಯ ಬಾತುಕೋಳಿಗಳನ್ನು ಸಾಕಿದ್ದರು. ಈ ತೋಟದ ಮೇಲೆ ದಾಳಿ ಮಾಡಿದ್ದ ಅರಣ್ಯಾಧಿಕಾರಿಗಳು ವಿದೇಶಿ ಪ್ರಭೇದದ ಬಾತು ಕೋಳಿ ವಶಕ್ಕೆ ಪಡೆದಿದ್ದರು. ಪ್ರಕರಣದ ವಿಚಾರಣೆಯು ಮೈಸೂರು ಜಿಲ್ಲೆ ಟಿ.‌ನರಸೀಪುರ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಇದೀಗ ನ್ಯಾಯಾಲಯವು ದರ್ಶನ್ ಹಾಗೂ ವಿಜಯಲಕ್ಷ್ಮಿ ಇಬ್ಬರಿಗೂ ಸಮನ್ಸ್ ಜಾರಿ ಮಾಡಿದ್ದು ಜುಲೈ 4 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದೆ.

ಬಾರ್‌ ಹೆಡೆಡ್‌ ಗೂಸ್‌ ಸಾಮಾನ್ಯವಾಗಿ ಮಧ್ಯ ಏಷ್ಯಾ ಪ್ರದೇಶದಲ್ಲಿ ಕಂಡು ಬರುತ್ತವೆ. ವಲಸೆ ಹಕ್ಕಿಗಳಾದ ಇವುಗಳನ್ನು ಸಾಕುವುದು ವನ್ಯಜೀವಿ ಸಂರಕ್ಷಣೆಯ ಕಾಯ್ದೆಯಡಿ ಅಪರಾಧವAಗಿರುತ್ತದೆ.  ಪ್ರಕರಣ ದಾಖಲಾಗಿದ್ದಾಗ, ಬಾತುಕೋಳಿಗಳನ್ನು ಸ್ನೇಹಿತರು ನೀಡಿದ್ದರು ಎಂದು ದರ್ಶನ್‌  ಸ್ಪಷ್ಟನೆಯನ್ನು ನೀಡಿದ್ದರು. ಆಗ ಅರಣ್ಯ ಇಲಾಖೆ ದರ್ಶನ್ ವಿರುದ್ಧ ನಿಷೇಧಿತ ವನ್ಯ ಪಕ್ಷಿಗಳ ಸಾಕಣೆಗಾಗಿ ಪ್ರಕರಣ ದಾಖಲಿಸಿತ್ತು.

RELATED ARTICLES
- Advertisment -
Google search engine

Most Popular