ನವದೆಹಲಿ: 1999ರ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಗೆಲುವಿಗಾಗಿ ಹುತಾತ್ಮರಾದ ಸೈನಿಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಗಿಲ್ ವಿಜಯ್ ದಿವಸ್ ಸಂದರ್ಭದ ಅಂಗವಾಗಿ (ಜುಲೈ 26) ಗೌರವ ಸಲ್ಲಿಸಿದ್ದಾರೆ.
ಈ ದಿನವು ಭಾರತದ ಅಪ್ರತಿಮ ಯೋಧರ ಶೌರ್ಯ, ಸಾಹಸಗಾಥೆಯನ್ನು ಮುನ್ನೆಲೆಗೆ ತರುವಂತಾಗಿದ್ದು, ಅವರು ಯಾವಾಗಲೂ ದೇಶದ ಜನರಿಗೆ ಸ್ಫೂರ್ತಿಯಾಗಿ ಉಳಿಯಲಿದ್ದಾರೆ ಎಂದು ಪ್ರಧಾನಿ ಹಿಂದಿಯಲ್ಲಿ ಟ್ವೀಟ್ ಮಾಡಿ ಗೌರವ ನಮನ ಸಲ್ಲಿಸಿರುವುದಾಗಿ ವರದಿಯಾಗಿದೆ.

ಯೋಧರ ಅಪ್ರತಿಮ ಸಾಹಸ, ತ್ಯಾಗವನ್ನು ನೆನಪಿಸಿಕೊಂಡಿರುವ ಪ್ರಧಾನಿ ಮೋದಿ ಜೈ ಹಿಂದ್ ಎಂದು ಉಲ್ಲೇಖಿಸಿದ್ದು, 1999ರಲ್ಲಿ ಲಡಾಖ್ ಸಮೀಪದ ಕಾರ್ಗೀಲ್ ಶಿಖರದಲ್ಲಿ ರಹಸ್ಯವಾಗಿ ಅಡಗಿಕುಳಿತಿದ್ದ ಪಾಕಿಸ್ತಾನಿ ಪಡೆಗಳನ್ನು ಹಿಮ್ಮೆಟ್ಟಿಸಿ, ಪ್ರತಿದಾಳಿ ನಡೆಸುವ ಮೂಲಕ ಪಾಕ್ ವಿರುದ್ಧ ಗೆಲುವು ಸಾಧಿಸಿದ ದಿನವನ್ನು ಕಾರ್ಗಿಲ್ ವಿಜಯ್ ಎಂದು ಆಚರಿಸಲಾಗುತ್ತಿದೆ.