ತುಮಕೂರು :ತುಮಕೂರು ಜಿಲ್ಲೆಯ ಗೊಲ್ಲರಹಟ್ಟಿಯಲ್ಲಿ ಬಾಣಂತಿ ಮತ್ತು ಮಗುವನ್ನು ಊರವರೆಗಿಟ್ಟು ಮೌಡ್ಯಮರೆದ ಪ್ರಕರಣ ದಲ್ಲಿ ಇದೀಗ ವಿಪರೀತ ಶೀತದಿಂದ ಬಳಲಿ ಮಗು ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ .
ತಮ್ಮ ದೇವರಿಗೆ ಸೂತಕ ಆಗಲ್ಲ ಎಂದು ಗೊಲ್ಲರಹಟ್ಟಿಯ ಕಾಡುಗೊಲ್ಲ ಸಮುದಾಯದವರು ಗಾಳಿ ಮಳೆಯನ್ನು ಲೆಕ್ಕಿಸದೆ ಬಾಣಂತಿ ಮತ್ತು ಮಗುವನ್ನು ಊರ ಹೊರಗಿನ ಚಿಕ್ಕ ಗುಡಿಸಿಲಿನಲ್ಲಿ ಇರಿಸಿದ್ದರು. ಆದರೆ ಈಗ ಶೀತ ಹೆಚ್ಚಾದ್ದರಿಂದ ಮಗುವನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಜಿಲ್ಲಾಸ್ಪತ್ರೆ ಐಸಿಯು ನಲ್ಲಿ ಹಸುಗುಸು ಪ್ರಾಣ ಬಿಟ್ಟಿರುವುದು ತಿಳಿದು ಬಂದಿದೆ.