ಮಂಡ್ಯ :ಸರ್ಕಾರದ ಮಹತ್ವಕಾಂಕ್ಷೆ ಯೋಜನೆ ಯಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಮಹಿಳೆಯರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ 2,000 ರೂಪಾಯಿ ಅನ್ನು ಮಹಿಳೆಯರ ಖಾತೆಗೆ ಜಮಾ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಯೋಜನೆ ಅನುಷ್ಠಾನಗೊಳಿಸಿದೆ.
ಮದ್ದೂರು ತಾಲೂಕಿನ ಕೊಪ್ಪ ಗ್ರಾಮದ ರಾಜು ಎಂಬುವವರ ಗ್ರಾಮಒನ್ ಕೇಂದ್ರದಲ್ಲಿ ಒಂದು ಅರ್ಜಿಗೆ ಸುಮಾರು 10 ರಿಂದ 50 ರೂಪಾಯಿ ವಸೂಲಿ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.
ಸರ್ಕಾರ ಗೃಹಲಕ್ಷ್ಮಿ ಯೋಜನೆಯ ನೋಂದಣಿಗೆ ಯಾವುದೇ ಶುಲ್ಕವನ್ನು ಪಡೆಯದಂತೆ ಆದೇಶ ನೀಡಿದ್ದರು, ಅದನ್ನು ಉಲ್ಲಂಘಿಸಿ ವಸೂಲಿ ಮಾಡುತ್ತಿರುವ ಸಿಬ್ಬಂದಿಗಳು ರಾಜಾರೋಷವಾಗಿ ಗೃಹಲಕ್ಷ್ಮಿ ಯೋಜನೆಯ ಹೆಸರಲ್ಲಿ ವಸೂಲಿ ದಂಧೆ ನಡೆಸುತ್ತಿದ್ದು , ತಾಲೂಕು ಆಡಳಿತ ಮಂಡಳಿ ಕಣ್ಮುಚ್ಚಿ ಕುಳಿತಿದೆ.