ಕಾಂಗ್ರೆಸ್ ನ ಮಹತ್ವದ ಯೋಜನೆಗೆ ಅರ್ಜಿ ಹಾಕಲು ಹೈರಾಣಾದ ಮಹಿಳೆಯರು, ಸರ್ವರ್ ಇಲ್ಲ ಅನ್ನೋ ಹಾರಿಕೆಯ ಉತ್ತರ ಕೊಡುತ್ತಿರುವ ಸೇವಾ ಕೇಂದ್ರದವರು.
ಬಾಗಲಕೋಟೆ :ಕಾಂಗ್ರೆಸ್ ಸರಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಲು ಮಹಿಳೆಯರು ಹೆಣಗಾಡುತ್ತಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ನಗರದಲ್ಲಿ ನಡೆದಿದೆ.
ಬಾದಾಮಿ ನಗರದ ಪುರಸಭೆಗೆ ಬರುವ ನಗರ ಒನ್ ಸೇವಾ ಕೇಂದ್ರದಲ್ಲಿ ಮಹಿಳೆಯರು ಕಳೆದ ಎರಡು ದಿನ ಗಳಿಂದ ಸರದಿ ಸಾಲಿನಲ್ಲಿ ನಿಂತು ಅರ್ಜಿ ಹಾಕಲು ಆಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಸರ್ವರ್ ಸಮಸ್ಯೆಯಿಂದ ಮಹಿಳೆಯರು ಕೇಂದ್ರದ ಮುಂದೆ ಕಾಯ್ದು ಕಾಯ್ದು ಹೈರಾಣಾಗುವ ಪರಿಸ್ಥಿತಿ ನಿರ್ಮಾಣವಾಗಿದ್ದು,ನೋಂದಣಿ ಕೇಂದ್ರಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.