Sunday, April 20, 2025
Google search engine

Homeರಾಜ್ಯಸುದ್ದಿಜಾಲಗುಂಡ್ಲುಪೇಟೆ: ಕೆಸರು ಗದ್ದೆಯಾದ ಎಪಿಎಂಸಿ ಆವರಣ

ಗುಂಡ್ಲುಪೇಟೆ: ಕೆಸರು ಗದ್ದೆಯಾದ ಎಪಿಎಂಸಿ ಆವರಣ

ಗುಂಡ್ಲುಪೇಟೆ: ತಾಲೂಕಿನಲ್ಲಿ ಎಡಬಿಡದೆ ಮಳೆ ಸುರಿಯುತ್ತಿರುವ ಕಾರಣ ಪಟ್ಟಣದ ಹೊರವಲಯದಲ್ಲಿರುವ ಎಪಿಎಂಸಿ ಪ್ರಾಂಗಣದ ಆವರಣ ಕೆಸರು ಗದ್ದೆಯಾಗಿ ಮಾರ್ಪಾಡಾಗಿದೆ. ಇದರಿಂದ ರೈತರು ಹಾಗು ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ.

ಗುಂಡ್ಲುಪೇಟೆ ಎಪಿಎಂಸಿಗೆ ಪ್ರತಿನಿತ್ಯ ಕೇರಳ, ತಮಿಳುನಾಡು ಸೇರಿದಂತೆ ಮೈಸೂರಿನಿಂದ ಹಲವು ವಾಹನಗಳು ತರಕಾರಿ ರಫ್ತು ಮತ್ತು ಆಮದಿಗೆ ಆಗಮಿಸುತ್ತಿವೆ. ಆದರೆ ಎಪಿಪಿಂಸಿ ಒಳಾಂಗಣದ ರಸ್ತೆಯಲ್ಲಿ ಬೃಹದಾಕಾರದ ಗುಂಡಿಗಳು ಬಿದ್ದಿರುವ ಕಾರಣ ಮಳೆ ನೀರು ನಿಂತು ಸಂಪೂರ್ಣ ಕೆಸರು ಮಯವಾಗಿದೆ. ಇದರಿಂದ ವಾಹನ ಸಂಚಾರ ಹಾಗು ರೈತ ಓಡಾಟಕ್ಕೆ ದುಸ್ತರವಾಗಿದೆ.

ಆಟೋ ಸವಾರರಿಗೆ ಪರದಾಟ: ತಾಲೂಕಿನ ವಿವಿಧ ಗ್ರಾಮಗಳಿಂದ ಪ್ರತಿನಿತ್ಯ ನೂರಾರು ಆಟೋಗಳಲ್ಲಿ ಹಲವು ತರಕಾರಿಗಳನ್ನು ತುಂಬಿಕೊಂಡು ಚಾಲಕರು ಆಗಮಿಸುತ್ತಾರೆ. ಆದರೆ ಎಪಿಎಂಸಿ ಆವರಣವೂ ಸಂಪೂರ್ಣ ಕೆಸರಿಮಯವಾಗಿರುವ ಕಾರಣ ಸಂಚಾರಕ್ಕೆ ತೊಂದರೆಯಾಗಿದ್ದು, ಕೆಲ ಸಂದರ್ಭದಲ್ಲಿ ಆಟೋ ಚಕ್ರ ಕೆಸರಿನಲ್ಲಿ ಹೂತು ಹೋಗಿ ಚಾಲಕರು ಪರದಾಡುವ ಸ್ಥಿತಿಯೂ ಬಂದೊದಗಿದೆ.

ರಸ್ತೆ ಕಾಂಕ್ರಟೀಕರಣಕ್ಕೆ ಒತ್ತಾಯ: ಮಳೆ ಬಂದ ಪ್ರತಿ ಸಂದರ್ಭದಲ್ಲು ಎಪಿಎಂಸಿ ಆವರಣದಲ್ಲಿ ಸಂಪೂರ್ಣ ಕೆಸರು ಗದ್ದೆಯಾಗಿ ಮಾರ್ಪಾಡಾಗುತ್ತಿರುವ ಕಾರಣ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ರಸ್ತೆಯನ್ನು ಕಾಂಕ್ರಿಟೀಕರಣಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ವಾಹನ ಚಾಲಕರು ಒತ್ತಾಯಿಸಿದ್ದಾರೆ.


RELATED ARTICLES
- Advertisment -
Google search engine

Most Popular