Saturday, April 19, 2025
Google search engine

Homeಅಪರಾಧಪರವಾನಗಿ ಇಲ್ಲದ ನಾಡ ಬಂದೂಕು ಸಂಗ್ರಹ: ಆರೋಪಿ ಬಂಧನ

ಪರವಾನಗಿ ಇಲ್ಲದ ನಾಡ ಬಂದೂಕು ಸಂಗ್ರಹ: ಆರೋಪಿ ಬಂಧನ

ಹನೂರು : ಜಲ್ಲಿಪಾಳ್ಯ ಗ್ರಾಮದ ಜಮೀನೊಂದರಲ್ಲಿ ಬಂದೂಕನ್ನು ಯಾವುದೇ ಪರವಾನಿಗೆ ಇಲ್ಲದೆ ಆಕ್ರಮವಾಗಿ ಸಂಗ್ರಹಿಸಿದ್ದ ಆರೋಪಿಯನ್ನು ರಾಮಾಪುರ ಪೋಲಿಸರು ಬಂಧಿಸಿದ್ದಾರೆ.

ಜಲ್ಲಿಪಾಳ್ಯ ಗ್ರಾಮದ ಕೊಳಂದೈ( 47) ಬಂಧಿತ ಆರೋಪಿಯಾಗಿದ್ದಾನೆ.

ಪ್ರಾಣಿಗಳನ್ನು ಬೇಟೆಯಾಡುವ ಉದ್ದೇಶದಿಂದ ಅಕ್ರಮವಾಗಿ ಜಮೀನಿನಲ್ಲಿ ನಾಡ ಬಂದೂಕನ್ನು ಇಟ್ಟುಕೊಂಡಿದ್ದರ ಖಚಿತ ಮಾಹಿತಿಯ ಮೇರೆಗೆ ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಕಶ್ಯಪ್ ಸರ್ ಹಾಗೂ ಸಬ್ ಇನ್ಸ್ಪೆಕ್ಟರ್ ರಾಧಾ ಹಾಗೂ ಸಿಬ್ಬಂದಿಯರಾದ ಸಿದ್ದೇಶ್ ,ಗಿರೀಶ್ ,ಮಂಜು ಹಾಗೂ ಇತರೆ ಸಿಬ್ಬಂದಿಯವರು ಜಮೀನಿಗೆ ಧಾಳಿ ನೆಡೆಸಿ ಪರಿಶೀಲಿಸಿದ್ದಾರೆ . ಈ ವೇಳೆ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮ ಬಂದೂಕನ್ನು ಇಟ್ಟುಕೊಂಡಿದ್ದನ್ನು ವಶಪಡಿಸಿಕೊಂಡು ಆರೋಪಿಯನ್ನು ದಸ್ತಗಿರಿ ಮಾಡಿ ಮುಂದಿನ ಕ್ರಮ ಜರುಗಿಸಿರುತ್ತಾರೆ.

ಈ ವೇಳೆ ಪೇದೆಗಳಾದ ಮಂಜು ,ಸಿದ್ದೇಶ್ ಸೇರಿದಂತೆ ಹಲವರು ಹಾಜರಿದ್ದರು.

RELATED ARTICLES
- Advertisment -
Google search engine

Most Popular