ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ಮನನೊಂದು ಮಂಜುನಾಥ್ ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಜೂನ್ 13ರಂದು ರಾಜಘಟ್ಟ ಗ್ರಾಮದ ಕೆರೆಯ ಬಳಿ ಸೆಲ್ಫಿ ವಿಡಿಯೋ ಮಾಡಿ ಮಾತ್ರೆ ಸೇವಿಸಿದ ಮಂಜುನಾಥ್, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ವಿಡಿಯೋದಲ್ಲಿ ಮಂಜುನಾಥ್, ಪ್ರೀತಿಸಿದ ಯುವತಿ ಗಗನ ಹಾಗೂ ಆಕೆಯ ಕುಟುಂಬಸ್ಥರು ತನ್ನನ್ನು ಕಿರುಕುಳಕ್ಕೆ ಒಳಪಡಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಯುವತಿ ಬೇರೊಬ್ಬನೊಂದಿಗೆ ಸಂಬಂಧದಲ್ಲಿದ್ದ ಕಾರಣ ಹತಾಶೆಗೊಂಡಿದ್ದುದಾಗಿ ತಿಳಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಮಂಜುನಾಥ್ ಮಾಡಿದ ಸೆಲ್ಫಿ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇತ್ತ ಪ್ರಕರಣ ದಾಖಲಾಗುತ್ತಿದ್ದಂತೆ ಯುವತಿ ಮತ್ತು ಆಕೆಯ ಕುಟುಂಬಸ್ಥರು ನಾಪತ್ತೆಯಾಗಿದ್ದಾರೆ.