ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಶ್ರೀನಿವಾಸ ಅಗ್ರಹಾರ ಗ್ರಾಮದ ನವೀನ್ ಎಂಬುವರು ಸಾಕಿದ್ದ ಈ ಹಳ್ಳಿಕಾರ್ ತಳಿಯ ಎತ್ತು ತಮಿಳುನಾಡು ಮೂಲದ ಸಿರವೈ ತಂಬಿ ಎಂಬುವರಿಂದ ೯.೨೦ ಲಕ್ಷಕ್ಕೆ ಎತ್ತು ಖರೀದಿದ್ದಾರೆ.
ಬ್ರಾಂಡ್ ಜಾಗ್ವಾರ್ ಹೆಸರಿನ ಈ ಎತ್ತು ರಾಜ್ಯವು ಸೇರಿದಂತೆ ಹೊರ ರಾಜ್ಯಗಳಲ್ಲಿ ಎತ್ತು ಗಾಡಿ ರೇಸ್‌ನಲ್ಲಿ ಪಾಲ್ಗೊಂಡು ಹಲವು ಪ್ರಶಸ್ತಿ ಗಳಿಸಿದ್ದು, ತಮಿಳುನಾಡಿನಲ್ಲಿ ನಡೆದ ರೇಸ್‌ನಲ್ಲಿ ಎತ್ತು ತನ್ನ ವೇಗದಿಂದ ಸಾಕಷ್ಟು ಪ್ರಸಿದ್ದಿ ಪಡೆದಿತ್ತು. ರೇಸ್‌ನಲ್ಲಿ ಈ ಜಾಗ್ವಾರ್ ಹೆಸರಿನ ಎತ್ತಿನ ವೇಗ ನೋಡಿ ಭಾರೀ ಮೊತ್ತಕ್ಕೆ ಎತ್ತು ಖರೀದಿ. ದಾಖಲೆ ಬೆಲೆಗೆ ಮಾರಾಟವಾದ ಎತ್ತುನ್ನು ಗ್ರಾಮದಲ್ಲಿ ಅದ್ದೂರಿ ಮೆರವಣಿಗೆ ಮಾಡಿ ಆರತಿ ಬೆಳಗಿ ನಮಸ್ಕರಿಸಿ ಭಾರದ ಮನಸ್ಸಿನಿಂದ ಕುಟುಂಬಸ್ಥರು ಬೀಳ್ಕೊಟ್ಟರು.